ಚೌಳಹಿರಿಯೂರಿನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ ಮತ್ತು ಶುಗರ್ ಪರೀಕ್ಷೆ ನಡೆಸಲಾಯಿತು. 
ನ್ಯೂಸ್

185 ಜನರಿಗೆ ಮಧುಮೇಹ ತಪಾಸಣೆ

ಚೌಳಹಿರಿಯೂರು: ಸ್ಥಳೀಯ ಕೆಪಿಎಸ್ ಶಾಲಾ ಆವರಣದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಮತ್ತು ಕಡೂರಿನ ಶರತ್ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಇಲ್ಲಿನ ಗ್ರಾಪಂ, ಸಂಜೀವಿನಿ ಗ್ರಾಪಂ ಒಕ್ಕೂಟ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಬೆಂಗಳೂರಿನ ಡಾ. ರಜಿತ್, ಡಾ. ದಿಲೀಪ್, ಡಾ. ಧನುಷ್, ಟೆಕ್ನಿಷಿಯನ್ ಚೈತ್ರಾ ಮತ್ತು ಸಿ.ಬಿ.ಯಶ್ವಂತ್, ಟಿ.ಆರ್.ಲಕ್ಷ್ಮಣ ಪಾಲ್ಗೊಂಡು 135 ಜನರನ್ನು ಪರೀಕ್ಷಿಸಿದರು. 10 ಜನರಿಗೆ ಹೃದಯ ಸಂಬಂಧಿ ತೊಂದರೆ ಕಂಡುಬಂದಿದ್ದರಿಂದ ಅವರಿಗೆ ಆಸ್ಪತ್ರೆ ಭೇಟಿಗೆ ಸೂಚಿಸಲಾಯಿತು. 185 ಜನರಿಗೆ ಬಿಪಿ, ಶುಗರ್ ಮತ್ತು ಕಣ್ಣಿನ ತಪಾಸಣೆಗೆ ಒಳಪಡಿಸಲಾಯಿತು. ಶಿಬಿರದಲ್ಲಿ ಎಕೋ, ಇಸಿಜಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಯಿತು.