ನ್ಯೂಸ್

ವ್ಹೀಲಿಂಗ್​ ಮಾಡುತ್ತಾ ಹುಡುಗಿಯರ ಮುಂದೆ ಪೋಸ್​ ಕೊಡಲು ಹೋಗಿ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಯುವಕ!

ತಿರುವನಂತಪುರಂ: ಯುವಕನೊಬ್ಬ ಬೈಕ್​ನಲ್ಲಿ ವ್ಹೀಲಿಂಗ್​ ಮಾಡುತ್ತಾ ಶಾಲಾ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿರುವ ಘಟನೆ ತಿರುವನಂತಪುರಂನ ಕಲ್ಲಂಬಲಮ್​ನಲ್ಲಿ ಭಾನುವಾರ (ಫೆ.12) ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆರೋಪಿ ಯುವಕನನ್ನು 18 ವರ್ಷದ ನೌಫಲ್​ ಎಂದು ಗುರುತಿಸಲಾಗಿದೆ. ಅಪಾಯಕಾರಿ ಡ್ರೈವಿಂಗ್​ ಸಂಬಂಧಿಸಿದಂತೆ ಯುವಕನ ವಿರುದ್ಧ 6 ಪ್ರಕರಣಗಳು ಈ ಹಿಂದೆಯೇ ದಾಖಲಾಗಿವೆ.

ವಿಡಿಯೋದಲ್ಲಿ ನೌಫಲ್ ತನ್ನ ಬೈಕ್‌ನ ಮುಂಭಾಗವನ್ನು ಎತ್ತುವ ಮೇಲಕ್ಕೆತ್ತಿ ವ್ಹೀಲಿಂಗ್​ ಮಾಡುವ ಮೂಲಕ ಸಾಹಸ ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಡಿಕ್ಕಿ ಹೊಡೆದಿದ್ದಾನೆ.

ವರದಿಗಳ ಪ್ರಕಾರ ಘಟನೆಯಲ್ಲಿ ಬೈಕ್​ ಸವಾರ ನೌಫಲ್ ಮತ್ತು ಶಾಲಾ ವಿದ್ಯಾರ್ಥಿನಿಗೆ ಗಾಯಗಳಾಗಿವೆ. ಇದೇ ಸಂದರ್ಭದಲ್ಲಿ ಮೋಟಾರು ವಾಹನ ಇಲಾಖೆ (ಎಂವಿಡಿ) ಬಾಲಕನ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವುದಾಗಿ ತಿಳಿಸಿದೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ಚೆನ್ನೈ ತಮಿಳು ನ್ಯೂಸ್​)