ನ್ಯೂಸ್

ಕಾರ್ಯಕ್ರಮದಲ್ಲಿ ಸಂಗೀತ ನುಡಿಸಿದ್ದಕ್ಕಾಗಿ 18 ವರ್ಷದ ಬಾಲಕನಿಗೆ ಚಾಕು ಇರಿದು ಹತ್ಯೆ: ನಾಲ್ವರ ಬಂಧನ | Delhi

Delhi: ಕಾರ್ಯಕ್ರಮವೊಂದರಲ್ಲಿ ಸಂಗೀತ ನುಡಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ 18 ವರ್ಷದ ಬಾಲಕನೊಬ್ಬ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ವಾಯುವ್ಯ ದೆಹಲಿಯಲ್ಲಿ ಭಾನುವಾರ (ಮೇ.18) ನಡೆದಿದೆ.

ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಸಂಗೀತ ನುಡಿಸುವ ವಿಚಾರದಲ್ಲಿ ಸೇನ್ ಮತ್ತು ಹುಡುಗರ ಗುಂಪಿನ ನಡುವೆ ಸಣ್ಣಪುಟ್ಟ ವಾಗ್ವಾದ ನಡೆದಿತ್ತು. ಮರುದಿನ ಪ್ರತೀಕಾರವಾಗಿ ಹುಡುಗರ ಗುಂಪು ಅವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದೆ ಎಂದು

ಎಂದು ಪೊಲೀಸರು ತಿಳಿಸಿದ್ದಾರೆ.

ಬಾಧೋಲಾ ಗ್ರಾಮದ ನಿವಾಸಿ ಭೀಮ್ ಸೇನ್ ಗಾಯಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ಭೀಮ್ ಸೇನ್​​ಗೆ ಎರಡು ಇರಿತದ ಗಾಯಗಳಾಗಿದ್ದು, ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಲಾಗಲಿಲ್ಲ ಎಂದು ಅಧಿಕಾರಿ ಹೇಳಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ನಾಲ್ವರು ಬಾಲಾಪರಾಧಿಗಳನ್ನು ಬಂಧಿಸಲಾಗಿದ್ದು, ದಾಳಿಗೆ ಬಳಸಿದ ಆಯುಧವನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)