ಏಷ್ಯನ್ ಈಜು ಸ್ಪರ್ಧೆಗೆ ರಾಜ್ಯದ 18 ಈಜುಪಟುಗಳು ಆಯ್ಕೆ
ಬೆಂಗಳೂರು: ಬ್ಯಾಂಕಾಕ್ನಲ್ಲಿ ನಡೆಯಲಿರುವ 12ನೇ ಏಷ್ಯನ್ ಏಜ್ ಗ್ರೂಪ್ ಈಜು ಚಾಂಪಿಯನ್ಷಿಪ್ಗೆ (12th Asian Age Group Swimming Championship) 40 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಈ ಪೈಕಿ 18 ಈಜುಪಟುಗಳು ಕರ್ನಾಟಕ ರಾಜ್ಯದವರಾಗಿದ್ದಾರೆ ಎಂದು ಕರ್ನಾಟಕ ಈಜು ಸಂಸ್ಥೆ ತಿಳಿಸಿದೆ.
ಭಾರತ ತಂಡಕ್ಕೆ ಆಯ್ಕೆಯಾಗಿರುವ ರಾಜ್ಯದ ಈಜುಪಟುಗಳು:
ಬಾಲಕರು: ದರ್ಶನ್ ಎಸ್. ಮೋನಿಷ್ ಪಿ.ವಿ, ಸಮರ್ಥ್ ಗೌಡ, ಶರಣ್ ಎಸ್, ಅಕ್ಷಜ್ ಠಾಕುರಿಯಾ, ಶ್ರೇಯಸ್ ಸುನೀಲ್.
ಬಾಲಕಿಯರು: ತಾನ್ಯಾ ಷಡಕ್ಷರಿ, ರುಜುಲಾ ಎಸ್, ಶ್ರೀ ಚರಣಿ ತುಮು, ಹರ್ಷಿಕಾ ರಾಮಚಂದ್ರ, ವಿಹಿತಾ ನಯನಾ, ಮಾನವಿ ವರ್ಮ, ಸುಹಾಸಿನಿ ಘೋಷ್, ತಿಸ್ಯ ಸೋನರ್, ಧಿನಿಧಿ ದೇಸಿಂಘು , ನೈಷಾ, ಚರಿತಾ ಪಣೀಂದ್ರನಾಥ್, ಇದಿಕಾ ಭಟ್.