ನ್ಯೂಸ್

ಈಶಾನ್ಯ ದೆಹಲಿ ಹಿಂಸಾಚಾರ: 106 ಮಂದಿ ಬಂಧನ, 18 ಎಫ್​ಐಆರ್​ ದಾಖಲು, ಯಾವುದೇ ರೂಮರ್​​ಗಳಿಗೆ ಕಿವಿಗೊಡಬೇಡಿ ಎಂದ ಪೊಲೀಸರು

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ 106 ಮಂದಿಯನ್ನು ಬಂಧಿಸಲಾಗಿದ್ದು 18 ಎಫ್​ಐಆರ್​ಗಳು ದಾಖಲಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಪೊಲೀಸ್​ ಪಿಆರ್​ಒ ರಾಂಧವಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಿಂಸಾಚಾರ ಹೆಚ್ಚಾಗಲು ಕಾರಣರಾದ ದುಷ್ಕರ್ಮಿಗಳನ್ನು ಗುರುತಿಸಲಾಗುತ್ತಿದೆ. ನಮ್ಮ ಬಳಿ ಸಿಸಿಟಿವಿ ಫೂಟೇಜ್​ಗಳು ಸೇರಿ ಹಲವು ಪ್ರಮುಖ ಸಾಕ್ಷಿಗಳಿವೆ. ಇವತ್ತು ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.

ಹಾಗೇ ದೆಹಲಿ ಪೊಲೀಸರು ಸಹಾಯವಾಣಿ ನಂಬರ್​ಗಳನ್ನು ಜನರಿಗೆ ನೀಡಿದ್ದಾರೆ. ಯಾರಿಗೇ ಸಹಾಯ ಬೇಕಿದ್ದರೂ ನೇರವಾಗಿ ಪೊಲೀಸರಿಗೆ ಕರೆ ಮಾಡಬಹುದು. ಯಾವುದೇ ರೂಮರ್​ಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)