ರೆಸೆಪ್ ತೆಯ್ಯಿಪ್ ಎರ್ದೊಗಾನ್ – ಟರ್ಕಿ ಅಧ್ಯಕ್ಷ 
ನ್ಯೂಸ್

ಈ ದೇಶದಲ್ಲಿ ಅಧ್ಯಕ್ಷನ ಫೋಟೊ ಮೇಲೆ ಮೀಸೆ ಬಿಡಿಸಿದ್ದಕ್ಕೆ 16ರ ಪೋರನ ಬಂಧನ!

ಟರ್ಕಿ: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ನ ಚುನಾವಣಾ ಪ್ರಚಾರದ ಪೋಸ್ಟರ್ ಮೇಲೆ ಮೀಸೆ ಬಿಡಿಸಿದ್ದಕ್ಕೆ 16 ವರ್ಷದ ಪೋರನನ್ನು ಟರ್ಕಿ ಅಧಿಕಾರಿಗಳು ಮಂಗಳವಾರ ಜೈಲಿಗೆ ಕಳುಹಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಟರ್ಕಿಯ ದೈನಿಕ ಪತ್ರಿಕೆಗಳಾದ ಬಿರ್ಗುನ್, ಕುಮ್ಹುರಿಯೆಟ್ ಮತ್ತು ಖಾಸಗಿ ಟಿವಿ ಸ್ಟೇಷನ್ ಹಾಲ್ಕ್ ಟಿವಿ ಸೇರಿದಂತೆ ಹಲವಾರು ಮಾಧ್ಯಮಗಳು, “ಆಗ್ನೇಯ ಮರ್ಸಿನ್ ಪಟ್ಟಣದ ಯುವಕನು ತನ್ನ ಮನೆಯ ಬಳಿಯ ಪೋಸ್ಟರ್ ಅನ್ನು ಪೆನ್ನಿನಿಂದ ವಿರೂಪಗೊಳಿಸಿ, ಹಿಟ್ಲರ್ ಮೀಸೆಯನ್ನು ಬರೆದಿದ್ದು ಅವಮಾನಕರ ಕಾಮೆಂಟ್ಗಳನ್ನು ಬರೆದಿದ್ದಾನೆ" ಎಂದು ಆರೋಪಿಸಿವೆ.

"ಮೀಸೆ ಬರೆದದ್ದು ಹೌದು. ಆದರೆ..."

ಸಿಸಿಟಿವಿ ಕ್ಯಾಮೆರಾಗಳಿಂದ ಗುರುತಿಸಲ್ಪಟ್ಟ ನಂತರ ಆತನನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅಧಿಕಾರಿಗಳು ಹದಿಹರೆಯದ ಬಾಲಕನನ್ನು ಆತನ ಮನೆಯಲ್ಲಿ ‘ಸಂದರ್ಶಿಸಿದ್ದು’, ಅಲ್ಲಿ ಆತ "ಮೀಸೆಯನ್ನು ಚಿತ್ರಿಸಿರುವುದನ್ನು ಒಪ್ಪಿಕೊಂಡ" ಎಂದು ವರದಿಯಾಗಿದೆ. ಆದರೆ ಅದರೊಂದಿಗೆ ಕಾಮೆಂಟ್ಗಳನ್ನು ಬರೆದಿರುವುದನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಎದುರು ಕರೆದೊಯ್ದಾಗ ಆತ "ಅಧ್ಯಕ್ಷರನ್ನು ಅವಮಾನಿಸಿದ್ದಾನೆ" ಎಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹತ್ತಿರದ ರಿಮಾಂಡ್ ಹೋಮ್ ನಲ್ಲಿ ಜೈಲಿಗೆ ಹಾಕಲಾಯಿತು ಎಂದು ಹಾಲ್ಕ್ ಟಿವಿ ವರದಿ ಮಾಡಿದೆ.

ಮೇ 20ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನಲ್ಲಿ ಜಯಗಳಿಸಿದ ನಂತರ ಎರ್ಡೊಗನ್ ಮುಂದಿನ ಐದು ವರ್ಷಗಳ ಅವಧಿಯನ್ನು ಪ್ರಾರಂಭಿಸಿದ್ದು ಟರ್ಕಿಯಲ್ಲಿ ತಮ್ಮ 28 ವರ್ಷಗಳ ಆಡಳಿತವನ್ನು 32 ವರ್ಷಗಳಿಗೆ ವಿಸ್ತರಿಸಿದರು.

ಟರ್ಕಿಯಲ್ಲಿ ಅಧ್ಯಕ್ಷರನ್ನು ಅವಮಾನಿಸಿದ್ರೆ ಜೈಲು ಹೊಸದಲ್ಲ

ನ್ಯಾಯಾಂಗ ಸಚಿವಾಲಯದ ಪ್ರಕಾರ, "ಅಧ್ಯಕ್ಷರನ್ನು ಅವಮಾನಿಸುವುದು" ಟರ್ಕಿಯಲ್ಲಿ ಅತ್ಯಂತ ಸಾಮಾನ್ಯ ಅಪರಾಧಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ ಕಳೆದ ವರ್ಷ 16,753 ಜನರಿಗೆ ಶಿಕ್ಷೆಯಾಗಿದೆ. (ಏಜೆನ್ಸೀಸ್)