Customs: ಥೈಲ್ಯಾಂಡ್‌ನಿಂದ ಮುಂಬೈಗೆ ಬಂದಿಳಿದ ಪ್ರಯಾಣಿಕನನ್ನು ಶಂಕಿಸಿದ ಭಾರತೀಯ ಕಸ್ಟಮ್ಸ್ ಅಧಿಕಾರಿಗಳು, ಆತ ಹೊತ್ತೊಯ್ಯುತ್ತಿದ್ದ ಸರಕನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅದರೊಳಗೆ 16 ಜೀವಂತ ವಿಷಪೂರಿತ ಹಾವುಗಳಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಹಾವುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ತಿಂಗಳಲ್ಲಿ ಇದೇ ರೀತಿ ಪತ್ತೆಹಚ್ಚಲಾದ ಮೂರನೇ ಪ್ರಕರಣ ಇದಾಗಿದೆ.
ಇದನ್ನೂ ಓದಿ: ಚಿನ್ನ ಖರೀದಿಗೆ ಒಳ್ಳೆಯ ಸಮಯ ಸನ್ನಿಹಿತ; ಮತ್ತೇ ಕುಸಿದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ದರ? | Gold Rate
ಮತ್ತೊಮ್ಮೆ ವನ್ಯಜೀವಿ ಕಳ್ಳಸಾಗಣೆ ಯತ್ನಕ್ಕೆ ಕಸ್ಟಮ್ಸ್ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಥೈಲ್ಯಾಂಡ್‌ನಿಂದ ಭಾರತಕ್ಕೆ ವಾಪಾಸ್ ಆಗುತ್ತಿದ್ದ ಪ್ರಯಾಣಿಕನ ನಡೆಯನ್ನು ಶಂಕಿಸಿ, ತಡೆ ಹಿಡಿದ ಅಧಿಕಾರಿಗಳಿಗೆ ಕಡೆಗೂ ತಮ್ಮ ಅನುಮಾನ ದಿಟವಾಗಿದೆ. ಆತ ಹೊತ್ತೊಯ್ಯುತ್ತಿದ್ದ ಸರಕಿನಲ್ಲಿದ್ದ 16 ಜೀವಂತ ಹಾವುಗಳನ್ನು ಇದೀಗ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ" ಎಂದು ವರದಿಯಾಗಿದೆ.
ಈ ಹಾವುಗಳ ಪೈಕಿ ಗಾರ್ಟರ್, ಖಡ್ಗಮೃಗದ ಇಲಿ ಮತ್ತು ಕೀನ್ಯಾದ ಮರಳು ಬೋವಾ ಹಾವುಗಳು ಸೇರಿದಂತೆ ಹಲವು ಪ್ರಭೇದಗಳು ಸೇರಿವೆ. ಪ್ರಸ್ತುತ, ಥೈಲಾಂಡ್ ಪ್ರಯಾಣಿಕನನ್ನು ಬಂಧಿಸಿರುವ ಖಾಕಿ ಪಡೆ, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿ ಹೇಳಿದೆ,(ಏಜೆನ್ಸೀಸ್).