ಹೈದರಾಬಾದ್: ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ (ಒಜಿಎಲ್) ಸೆಪ್ಟೆಂಬರ್ 30,2024 ಕ್ಕೆ ಕೊನೆಗೊಳ್ಳುವ ತನ್ನ ದ್ವಿತೀಯ ತ್ರೈಮಾಸಿಕ ಮತ್ತು ಅರ್ಧ ವರ್ಷದ ಏಕೀಕೃತ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ. 156ರಷ್ಟು ಏರಿಕೆ ಕಂಡಿದೆ.
ಓಲೆಕ್ಟ್ರಾ ತನ್ನ ನಿರ್ದೇಶಕರ ಮಂಡಳಿಯು ಈ ಗಮನಾರ್ಹ ಸಾಧನೆಗಳನ್ನು ಅಧಿಕೃತವಾಗಿ ಅನುಮೋದಿಸಿದ್ದು, ಎರಡನೇ ತ್ರೈಮಾಸಿಕದಲ್ಲಿ, ಒಲೆಕ್ಟ್ರಾ 315 ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಅಂದರೆ 23-24 ರಲ್ಲಿ 154 ವಿತರಿಸಲಾಗಿದ್ದು, ಈ ವರ್ಷದ ಸಾಧನೆ ಶೇಕಡಾ 105 ರಷ್ಟು ಹೆಚ್ಚಾಗಿದೆ ಎಂದು ಮಂಡಳಿ ತಿಳಿಸಿದೆ.
ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದ ಆದಾಯವು 523.67 ಕೋಟಿ ರೂ, ಆಗಿದ್ದು, ಇದು 70% ಹೆಚ್ಚಾಗಿದೆ. ಈ ತ್ರೈಮಾಸಿಕದಲ್ಲಿ ಹೆಚ್ಚಿನ ವಿತರಣೆಗಳ ಪರಿಣಾಮವಾಗಿ ಈ ಗಮನಾರ್ಹ ಆದಾಯದ ಬೆಳವಣಿಗೆಯನ್ನು ದಾಖಲಿಸಲಾಗಿದೆ. ಕಂಪನಿಯು ಇಲ್ಲಿಯವರೆಗೆ 2,217 ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಿದೆ. ಈ ಅದ್ಭುತ ಸಾಧನೆಗೆ ತಂಡಕ್ಕೆ ಅಭಿನಂದನೆ ತಿಳಿಸಿರುವ ಮಂಡಳಿಯು ಒಟ್ಟು 10,503 ಬಸ್ ವಿತರಣೆ ಆದೇಶದೊಂದಿಗೆ ಬಲವಾದ ಬೇಡಿಕೆ ಮುಂದುವರೆಸಿಕೊಂಡಿದೆ.
ಸೆಪ್ಟೆಂಬರ್ 30,2024 ಕ್ಕೆ ಕೊನೆಗೊಂಡ ಅರ್ಧ ವರ್ಷದಲ್ಲಿ ಕಂಪನಿಯು ಪ್ರತಿ ಷೇರಿಗೆ ಗಳಿಕೆ (ಇಪಿಎಸ್) 8.72 ರೂ ಎಂದು ವರದಿ ಮಾಡಿದೆ, ಇದು ಸೆಪ್ಟೆಂಬರ್ 30,2023 ಕ್ಕೆ ಕೊನೆಗೊಂಡ ಹಿಂದಿನ ಅರ್ಧ ವರ್ಷದಲ್ಲಿ 4.40 ರೂ. ಗಳಾಗಿತ್ತು.
ಈ ಉತ್ತಮ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಸಿಎಂಡಿ ಕೆ. ವಿ. ಪ್ರದೀಪ್, "ಕ್ಯೂ 2 ಮತ್ತು ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ 24-25 ರ ದ್ವಿತೀಯ ತ್ರೈಮಾಸಿಕ ನಮ್ಮ ಏಕೀಕೃತ ಆದಾಯ ಮತ್ತು ಲಾಭದಾಯಕತೆಯಲ್ಲಿ ಬಲವಾದ ಬೆಳವಣಿಗೆಯನ್ನು ವರದಿ ಮಾಡಲು ನಾವು ಸಂತೋಷಪಡುತ್ತೇವೆ. ನಮ್ಮ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ನಮ್ಮ ತಂತ್ರಜ್ಞಾನ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ನಮ್ಮ ಗಮನ ಮುಂದುವರಿಯುತ್ತದೆ. ನಮ್ಮ ಆರ್ಡರ್ ಬುಕ್ ಸದೃಢವಾಗಿ ಉಳಿದಿದೆ ಎಂದು ಹರ್ಷಿಸಿದ್ದಾರೆ.