ಪುರಿ: ಒಡಿಶಾದ ಪುರಿಯಲ್ಲಿ 15 ವರ್ಷದ ಬಾಲಕನೊಬ್ಬ(Boy Death) ಹಳಿ ಮೇಲೆ ನಿಂತು ರೀಲ್ಸ್ ಮಾಡುವಾಗ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಜನಕ್‌ದೇವ್‌ಪುರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಮಂಗಳಘಾಟ್‌ನ ನಿವಾಸಿ ವಿಶ್ವಜೀತ್ ಸಾಹು(15) ಮೃತನಾದ ಬಾಲಕ. ತನ್ನ ತಾಯಿಯೊಂದಿಗೆ ದಕ್ಷಿಣಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎನ್ನಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸಾವು ಹಳಿಯ ಒಂದು ಬದಿಯಲ್ಲಿ ನಿಂತು ರೆಕಾರ್ಡ್ ಮಾಡುತ್ತಿದ್ದು, ಇನ್ನೊಂದು ಬದಿಯಿಂದ ರೈಲು ಬರುತ್ತಿರುವುದು ಕಾಣುತ್ತಿದೆ. ಈ ವೇಳೆ ರೈಲು ಹತ್ತಿರ ಬಂದ ಬಳಿಕ ಗಾಳಿಗೆ ಸಾಹು ಕೈಯಲ್ಲಿದ್ದ ಫೋನ್ ನೆಲಕ್ಕೆ ಬಿದ್ದಿದೆ. ಅದೇ ವೇಳೆ ಸಾಹುಗೆ ರೈಲು ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಒಡಿಶಾ ರೈಲ್ವೆ ಪೊಲೀಸರು ಧಾವಿಸಿ, ಶವವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)