ನ್ಯೂಸ್

ನವೋದ್ಯಮ ಪ್ರಶಸ್ತಿಗಳಲ್ಲಿ 15 ರಾಜ್ಯದ ಪಾಲು

lakshmihegde

ಬೆಂಗಳೂರು: ‘ನವೋದ್ಯಮ ಭಾರತ’ ಸ್ಪರ್ಧೆಯಲ್ಲಿ ಕರ್ನಾಟಕ ಅಗ್ರ ಸ್ಥಾನಿಯಾಗಿ ಹೊರಹೊಮ್ಮಿದ್ದು, ಕೊಡಮಾಡಿದ 36 ಪ್ರಶಸ್ತಿಗಳ ಪೈಕಿ 15 ರಾಜ್ಯದ ಪಾಲಾಗಿವೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮಟ್ಟದ ವಿವಿಧ ವಿಭಾಗಗಳ ಪ್ರಶಸ್ತಿಗಾಗಿ ಕರ್ನಾಟಕದ 418 ನವೋದ್ಯಮಗಳು ಸೇರಿ ದೇಶಾದ್ಯಂತ 1,641 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಸ್ಪರ್ಧೆಯಲ್ಲಿ ರಾಜ್ಯದ 14 ನವೋದ್ಯಮಗಳು, 1 ವೇಗವರ್ಧಕ ಉದ್ಯಮ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿವೆೆ ಎಂದು ಹೇಳಿದ್ದಾರೆ. ಅರಿವು ಕಾರ್ಯಕ್ರಮಗಳನ್ನು ನಡೆಸಿದ ಪ್ರತಿಫಲವಾಗಿ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಸಾಧನೆ ಮೆರೆದ 14 ನವೋದ್ಯಮಗಳ ಪೈಕಿ 11 ನವೋದ್ಯಮ ಕೋಶದಿಂದ ನಡೆಸಲಾಗಿದ್ದ ಎಲಿವೇಟ್/ಐಡಿಯಾ 2ಪಿಒಸಿ ಅನುದಾನಿತ ಕಾರ್ಯಕ್ರಮಗಳಲ್ಲಿ ಗಮನ ಸೆಳೆದು, ಜಯಗಳಿಸಿದ್ದವು ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.