ನ್ಯೂಸ್

14ರಂದು ಕಲಾ ನೇಕಾರ ಜಿಲ್ಲಾ ಘಟಕ ಆರಂಭ

ಚಿತ್ರದುರ್ಗ: ಮಾ.14ರಂದು ನಗರದ ಕ್ರೀಡಾಭವನದಲ್ಲಿ ಕಲಾ ನೇಕಾರ ಜಿಲ್ಲಾ ಘಟಕವನ್ನು ಆರಂಭಿಸುತ್ತಿರುವುದಾಗಿ ಸಂಸ್ಥೆ ಪ್ರಮುಖ ಕೋಲಂನಳ್ಳಿ ಪೀತಾಂಬರ್ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಂಜೆ 4ಕ್ಕೆ ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟೆ ಪದ್ಮಶಾಲಿ ಗುರುಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಜಿಲ್ಲಾ ಘಟಕವನ್ನು ಉದ್ಘಾಟಿಸಲಿದ್ದಾರೆ.

ಸಮುದಾಯದ ಕಲಾವಿದರನ್ನು ಸಮಾಜ ಮುಖ್ಯವಾಹಿತಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯಮಟ್ಟದಲ್ಲಿ ಸಂಸ್ಥೆ ಸ್ಥಾಪನೆಯಾಗಿದ್ದು, ಈಗ ಜಿಲ್ಲಾ ಮಟ್ಟದಲ್ಲೂ ಸಂಸ್ಥೆ ಚಟುವಟಿಕೆಗಳು ವಿಸ್ತರಣೆಯಾಗುತ್ತಿದೆ. ಅಂದಿನ ಸಮಾರಂಭದಲ್ಲಿ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್,ಸಂಸ್ಥೆ ಪ್ರಧಾನ ಕಾರ‌್ಯದರ್ಶಿ ಡಿ.ಎನ್.ನಾಗೇಶ್ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ವೇಳೆ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾ ಗಿರುವ ಸಮುದಾಯದ ಜನಪ್ರತಿನಿಧಿಗಳನ್ನು ಗೌರವಿಸಲಾಗುವುದೆಂದು ತಿಳಿಸಿದರು. ರಾಘವೇಂದ್ರ ಪದ್ಮಶಾಲಿ,ಕಾಚಾಪುರ ರಂಗಪ್ಪ ಮತ್ತಿತರರು ಇದ್ದರು.