ನ್ಯೂಸ್

ಮೊಬೈಲ್​ ಕೊಡುತ್ತೇನೆ ಬಾ ಎಂದು ನಾಲ್ಕು ವರ್ಷದ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ 14 ವರ್ಷದ ಬಾಲಕ...

ಮುಂಬೈ: ಮಹಾರಾಷ್ಟ್ರದ ಪುಣೆಯ ಅಲ್ನಾಡಿಯಲ್ಲಿ 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ 14 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಾಲಕ ಮಗುವಿನ ಪಕ್ಕದ ಮನೆಯವನು. ಸೋಮವಾರ ಸಂಜೆ ಮಗು ಮನೆಯ ಹೊರಗೆ ಆಟವಾಡುತ್ತಿತ್ತು. ಅದನ್ನು ನೋಡಿದ ಬಾಲಕ ಅಲ್ಲಿಗೆ ಹೋಗಿದ್ದಾನೆ. ತನ್ನ ಮೊಬೈಲ್​ ನಿನಗೆ ಕೊಡುತ್ತೇನೆ ಎಂದು ಹೇಳಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅದನ್ನು ನಂಬಿ ಅವನ ಹಿಂದೆ ಹೋದ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಅದಾದ ಬಳಿಕ ಮನೆಗೆ ಬಂದ ಬಾಲಕಿಗೆ ಒಂದೇ ಸಮನೆ ರಕ್ತಸ್ರಾವ ಆಗುತ್ತಿತ್ತು. ಅದನ್ನು ನೋಡಿದ ಪಾಲಕರು ಕೂಡಲೇ ಆಸ್ಪತ್ರೆಗೆ ತೆರಳಿದ್ದಾರೆ. ದಾರಿ ಮಧ್ಯೆ ಬಾಲಕಿ ತನಗೇನಾಯಿತು ಎಂಬುದನ್ನು ಹೇಳಿದ್ದಾಳೆ ಎನ್ನಲಾಗಿದೆ.

ಆಕೆ ಸದ್ಯ ಪುಣೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಯ ಬಳಿಕ ಆರೋಪಿ ಬಾಲಕ ಮನೆಯಿಂದ ಓಡಿ ಹೋಗಿ ಹತ್ತಿರದ ಕೃಷಿಭೂಮಿಯಲ್ಲಿ ಅಡಗಿಕೊಂಡಿದ್ದ. ಆದರೆ ಮಂಗಳವಾರ ಆಹಾರಕ್ಕಾಗಿ ಅಲ್ಲಿಂದ ಹೊರಬಿದ್ದಿದ್ದ. ಇದೇ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)