ಕಾರವಾರ: ( Yallapur Accident ) ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಸಂಧ್ಯಾ ಸರಸ್ವತಿಗೆ ವರದಾನವಾದ ಅದಾಲತ್ : ಅಸ್ವಸ್ಥ ಮಗುವಿನ ಚಿಕಿತ್ಸೆಗೆ ನೆರವು : ಬಗೆಹರಿದ ಜಾಗದ ಸಮಸ್ಯೆ
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ನೆರವು ನೀಡುತ್ತಿದೆ. ಪಿಎಂಎನ್‌ಆರ್‌ಎಫ್‌ನಿಂದ ಮೃತ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಳುಗಳಿಗೆ ತಲಾ 50,000 ರೂ. ಗಳನ್ನು ಘೋಷಿಸಲಾಗಿದೆ'' ಎಂದಿದ್ದಾರೆ.
ಹಣ್ಣು ತರಕಾರಿ ತುಂಬಿ ವ್ಯಾಪಾರಸ್ಥರೊಂದಿಗೆ ಸಂತೆಗೆ ತೆರಳುತ್ತಿದ್ದ ಲಾರಿಯೊಂದು ಕಂದಕ್ಕಕ್ಕೆ ಉರುಳಿ10 ಜನರು ಜೀವ ಕಳೆದುಕೊಂಡು 10ಕ್ಕೂ ಜನ ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ಬೆಳಗಿನ ಜಾವ ನಡೆದಿದೆ.
ಇದನ್ನೂ ಓದಿ: ಸಂಧ್ಯಾ ಸರಸ್ವತಿಗೆ ವರದಾನವಾದ ಅದಾಲತ್ : ಅಸ್ವಸ್ಥ ಮಗುವಿನ ಚಿಕಿತ್ಸೆಗೆ ನೆರವು : ಬಗೆಹರಿದ ಜಾಗದ ಸಮಸ್ಯೆ
ಕ್ರೂಸರ್ ವಾಹನ ಪಲ್ಟಿಯಾಗಿ ಚಾಲಕ ಮತ್ತು ಮಂತ್ರಾಲಯ ಮಠದ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸೇರಿ ಒಟ್ಟು ನಾಲ್ವರು ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ರಾಯಚೂರಿನ ಸಿಂಧನೂರು ಬಳಿ ನಡೆದಿದೆ.