ನ್ಯೂಸ್

ಮರಕ್ಕೆ ಡಿಕ್ಕಿ ಹೊಡೆದು ಎರಡು ತುಂಡಾಗಿ ಬಿದ್ದ ಬಸ್; 14 ಜನ ಸಾವು...20 ಮಂದಿಗೆ ಗಾಯ

ಥಾಯ್ಲೆಂಡ್: ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ 14 ಮಂದಿ ಪ್ರಾಣ ಕಳೆದುಕೊಂಡು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಥಾಯ್ಲೆಂಡ್‌ನ ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದಲ್ಲಿ ಸೋಮವಾರ (ಡಿಸೆಂಬರ್ 4, 2023) ಮಧ್ಯರಾತ್ರಿ  ಈ ಘಟನೆ ನಡೆದಿದೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಬಸ್ ಮರಕ್ಕೆ ಡಿಕ್ಕಿ ಹೊಡೆದು ಎರಡು ಭಾಗವಾಯಿತು. ಬಸ್‌ಗೆ ತೀವ್ರ ಹಾನಿಯಾಗಿದ್ದು, ಅವಶೇಷಗಳಡಿ ಸಿಲುಕಿದ್ದ ಸಂತ್ರಸ್ತರನ್ನು ಹೊರತೆಗೆಯಲು ರಕ್ಷಣಾ ತಂಡ ಶ್ರಮಿಸಿದೆ. ಬಸ್  ಬ್ಯಾಂಕಾಕ್​​ನಿಂದ ಸಾಂಗ್‌ಖ್ಲಾ ಪ್ರಾಂತ್ಯದ ನಥಾವಿ ಜಿಲ್ಲಿಗೆ ತೆರಳುತ್ತಿತ್ತು. ಈ ಭೀಕರವಾದ ಅಪಘಾತಕ್ಕೆ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಅಪಘಾತದ ತೀವ್ರತೆಯಿಂದಾಗಿ ಬಸ್ ಎರಡು ಭಾಗವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕಾರಣವನ್ನು ತನಿಖೆ ಮಾಡಲಾಗಿದೆ. ಬಸ್ ಅತಿ ವೇಗದಲ್ಲಿ ಸಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.