ನ್ಯೂಸ್

ವಿಕ್ರಮಾದಿತ್ಯ ನೌಕೆಯಲ್ಲಿ ಮತ್ತೆ ಬೆಂಕಿ

karawar

ಕಾರವಾರ: ಭಾರತೀಯ ನೌಕಾಸೇನೆಯ ಯುದ್ಧ ವಿಮಾನ ವಾಹಕ ನೌಕೆ ಐಎನ್ ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಕಾರವಾರ ಸಮೀಪ ಅರಬ್ಬಿ ಸಮುದ್ರದಲ್ಲಿ ತೆರಳುತ್ತಿರುವ ವೇಳೆ ಗುರುವಾರ ಈ ಘಟನೆ ಸಂಭವಿಸಿದೆ.

ಬೆಂಕಿಯನ್ನು ಆರಿಸಲಾಗಿದ್ದು, ಯಾರಿಗೂ ಹಾನಿಯಾಗಿಲ್ಲ ಎಂದು ನೌಕಾನೆಲೆ‌ ಮೂಲಗಳು ತಿಳಿಸಿವೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ನೌಕಾಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟ್ವೀಟ್ ಮಾಡಿದ್ದಾರೆ.

ಎರಡನೇ ಬಾರಿ:

2019 ರ ಏಪ್ರಿಲ್ ತಿಂಗಳಲ್ಲೂ ನೌಕೆಯಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಒಬ್ಬ ನೌಕಾ ಅಧಿಕಾರಿ ಮೃತಪಟ್ಟಿದ್ದರು.

ಇತ್ತೀಚೆಗಷ್ಟೇ ರಿಪೇರಿ

2013 ರಲ್ಲಿ ರಷ್ಯಾದಿಂದ ಖರೀದಿಸಿರುವ ಯುದ್ಧ ವಿಮಾನ ವಾಹಕ ನೌಕೆಯನ್ನು ಈಗಾಗಲೇ ಹಲವು ಬಾರಿ ದುರಸ್ತಿ ಮಾಡಲಾಗಿತ್ತು. ಇತ್ತೀಚೆಗೆ ಕಾರವಾರದಲ್ಲಿ ಸುಮಾರು 18 ತಿಂಗಳ ನಿರಂತ ದುರಸ್ತಿ ಕಾರ್ಯದ ಬಳಿಕ ಜೂನ್ 17 ಗಸ್ತಿಗೆ ಹೊರಟಿತ್ತು.

ವಿಕ್ರಮಾದಿತ್ಯ ಇನ್ನೂ ಆಳ ಸಮುದ್ರದಲ್ಲಿದ್ದು, ಗುರುವಾರ ಕಾರವಾರದ ಸೀಬರ್ಡ್ ನೌಕಾನೆಲೆಯ ಜಟ್ಟಿಗೆ ತರಲಾಗುತ್ತದೆ. ಅಗ್ನಿ ಅವಘಡದಿಂದಾದ ಹಾನಿಯ ನಿಖರವಾದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.ವಿಕ್ರಮಾದಿತ್ಯ ಇನ್ನೂ ಆಳ ಸಮುದ್ರದಲ್ಲಿದ್ದು, ಗುರುವಾರ ಕಾರವಾರದ ಸೀಬರ್ಡ್ ನೌಕಾನೆಲೆಯ ಜಟ್ಟಿಗೆ ತರಲಾಗುತ್ತದೆ. ಅಗ್ನಿ ಅವಘಡದಿಂದಾದ ಹಾನಿಯ ನಿಖರವಾದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.