ನ್ಯೂಸ್

ಮದುವೆ ಮಾಡಿದ್ರೆ ಮಾತ್ರ ಶಾಲೆಗೆ ಹೋಗುತ್ತೇನೆಂದ 13 ವರ್ಷ ಬಾಲಕನಿಗೆ ನಡೆಯಿತ್ತು ಮದುವೆ

ಪಾಕಿಸ್ತಾನ: ಮಕ್ಕಳ ಹಠಮಾರಿತನಕ್ಕೆ ಕೆಲವೊಮ್ಮೆ ಪಾಲಕರು ತಲೆಬಾಗಬೇಕಾಗುತ್ತದೆ. ಪಾಕಿಸ್ತಾನದಲ್ಲಿ, ಒಬ್ಬ ಹುಡುಗ ತನ್ನ ಹೆತ್ತವರ ಮುಂದೆ ಮದುವೆ ಮಾಡಿದ್ರೆ ಶಾಲೆ ಮಾತ್ರ ಹೋಗುತ್ತೇನೆಂದು ಹಠಕ್ಕೆ ಕುಟುಂಬಸ್ಥರು ಒಪ್ಪಿ ಮದುವೆ ಮಾಡಿದ್ದು ಎಲ್ಲೆಡೆ ಸುದ್ದಿಯಾಗುತ್ತಿದೆ.

ವಾಸ್ತವವಾಗಿ, ಮದುವೆಗೆ ಸರಿಯಾದ ವಯಸ್ಸು 21 ವರ್ಷಗಳು ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಈ ಮದುವೆಯನ್ನು ನೋಡಿ. ಬಾಲ್ಯವಿವಾಹಕ್ಕೆ ಈ ಮದುವೆಯೇ ಉದಾಹರಣೆ. ಅಲ್ಲಿ ಮಗುವಿನ ಮೊಂಡುತನದಿಂದಾಗಿ, ಅವನ ಹೆತ್ತವರು ತಮ್ಮ ಮಗನಿಗೆ 13 ನೇ ವಯಸ್ಸಿನಲ್ಲಿ ಮಣಿದು ಮದುವೆ ಮಾಡಬೇಕಾಯಿತು. ಈ ವಿಷಯ ಪಾಕಿಸ್ತಾನದ್ದು ಎನ್ನಲಾಗ್ತಿದೆ.

ಮಾಹಿತಿ ಪ್ರಕಾರ, 13 ವರ್ಷದ ಬಾಲಕ ಯಾವಾಗಲೂ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದ. ಶಾಲೆಗೆ ಹೋಗಲೇಬೇಕು. ನಿನಗೆ ಏನು ಬೇಕು ಹೇಳು ಕೊಡಿಸುತ್ತೇನೆ ಎಂದು ಪೋಷಕರು ಆತನನ್ನು ಕೇಳಿದ್ದಾರೆ. ಆಗ ಆ ಬಾಲಕ ನನಗೆ ಮದುವೆ ಮಾಡಬೇಕು. ಮದುವೆ ಮಾಡಿದರೆ ಮಾತ್ರ ಶಾಲೆಗೆ ಹೋಗುತ್ತೇನೆ ಎಂದು ಹಠ ಹಿಡಿದು ಕುಂತಿದ್ದಾನೆ. ಇದರಿಂದಾಗಿ ವಿಧಿ ಇಲ್ಲದೇ, ಅವರ ಸಂಬಂಧಿಗಳಲ್ಲೇ 12 ವರ್ಷದ ಬಾಲಕಿ ಜೊತೆ ಆತನಿಗೆ ಮದುವೆ ಮಾಡಿಸಿದ್ದಾರೆ. ಹಠಕ್ಕೆ ತಲೆಬಾಗಿದ ಬಾಗಿದ ಪೋಷಕರು 12 ವರ್ಷದ ಬಾಲಕಿಯನ್ನು ಹುಡುಕಿ ಮದುವೆ ಮಾಡಿದ್ದಾರೆ. ಈ ಅಪ್ರಾಪ್ತರ ವಿಚಿತ್ರ ಮದುವೆಯ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸಲಾಮ್‌ ಪಾಕಿಸ್ತಾನ್‌ ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಇಂತಹದ್ದೊಂದು ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ.

ಪಾಕಿಸ್ತಾನದಲ್ಲಿ ಮದುವೆಗೆ ಕನಿಷ್ಠ ಗಂಡಿಗೆ 18 ವರ್ಷ ಹಾಗೂ ಹೆಣ್ಣಿಗೆ 16 ವರ್ಷ ತುಂಬಿರಬೇಕು. ಇಲ್ಲಿ ಹುಡುಗನಿಗೆ 13 ವರ್ಷ ಹಾಗೂ ಹುಡುಗಿಗೆ 12 ವರ್ಷ. ಹೀಗಾಗಿ ಅಲ್ಲಿನ ಕಾನೂನು ಪ್ರಕಾರ ಈ ಮದುವೆ ಅಪರಾಧ. ಇದಕ್ಕೆ ಕಠಿಣ ಶಿಕ್ಷೆ ಇದೆ. ಆದ್ರೆ ಈ ಮದುವೆ ಅಧಿಕೃತ ಅಲ್ಲ ಎನ್ನಲಾಗುತ್ತದೆ. ಬಾಲಕನ ಆಸೆ ತೀರಿಸೋದಕ್ಕಾಗಿ ತಮಾಷೆಗೆ ಈ ಮದುವೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.