ನ್ಯೂಸ್

ಸೀಕ್ರೆಟ್ ಸರ್ವಿಸ್ ಏಜೆಂಟ್ ನೇಮಕಗೊಂಡ 13 ವರ್ಷದ ಬಾಲಕ! ನೆರವೇರಿತು ಕೊನೆಯ ಆಸೆ..Secret Service Agent

ಅಮೆರಿಕಾ:  (Secret Service Agent) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ 13 ವರ್ಷದ ಬಾಲಕ ಡಿಜೆ ಡೇನಿಯಲ್​​ಗೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿ ಕೆಲಸ ನೀಡಿದ್ದಾರೆ.

ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿ ನೇಮಕಗೊಂಡ ಡಿಜೆ ಡೇನಿಯಲ್​​ಗೆ ಇತ್ತೀಚೆಗೆ ಗುರುತಿನ ಚೀಟಿ ಹಾಗೂ ಸಮವಸ್ತ್ರವನ್ನು ನೀಡಲಾಯಿತು. ಈ ಹುಡುಗ ಇತ್ತೀಚೆಗೆ ಶ್ವೇತಭವನದ ಓವಲ್ ಕಚೇರಿಗೆ ಹೋಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ. ಇಷ್ಟು ದೊಡ್ಡ ಅವಕಾಶ ನೀಡಿದ್ದಕ್ಕಾಗಿ ಮತ್ತು ದೀರ್ಘಕಾಲದ ಆಸೆಯನ್ನು ಈಡೇರಿಸಿದ್ದಕ್ಕಾಗಿ ಡಿಜೆ ಡೇನಿಯಲ್ ಟ್ರಂಪ್‌ಗೆ ಧನ್ಯವಾದ ತಿಳಿಸಿದ್ದಾನೆ.

ಡಿಜೆ ಡೇನಿಯಲ್ ಅವರ ಕುಟುಂಬ ಸದಸ್ಯರೊಂದಿಗೆ ಓವಲ್ ಕಚೇರಿಗೆ ಬಂದರು. ಟ್ರಂಪ್ ಅವರೆಲ್ಲರನ್ನೂ  ಭೇಟಿಯಾದರು. ಡೇನಿಯಲ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಟ್ರಂಪ್ ಸೂಚಿಸಿದರು.

ಡಿಜೆ ಡೇನಿಯಲ್ ಯಾರು?  ಈ ಹುದ್ದೆಯನ್ನು ನೀಡಿದ್ದು ಯಾಕೆ ಗೊತ್ತಾ?

13 ವರ್ಷದ ಡಿಜೆ ಡೇನಿಯಲ್ (ಸೀಕ್ರೆಟ್ ಸರ್ವಿಸ್ ಏಜೆಂಟ್)  ಟೆಕ್ಸಾಸ್ ಮೂಲದ ನಿವಾಸಿಯಾಗಿದ್ದಾನೆ.  ಈ ಹುಡುಗನಿಗೆ 2018 ರಲ್ಲಿ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಕ್ಯಾನ್ಸರ್  ವಿರುದ್ಧವಾಗಿ ಹೋರಾಡುತ್ತಿದ್ದಾನೆ. ಡಿಜೆ  ಇನ್ನು ಕೆಲವು ತಿಂಗಳುಗಳು ಮಾತ್ರ ಬದುಕುತ್ತಾನೆ ಎಂದು ವೈದ್ಯರು ಹೇಳಿದರು.

ಡಿಜೆ ಡೇನಿಯಲ್ ಅವರ ಕೊನೆಯ ಆಸೆ ಯುಎಸ್ ಸೀಕ್ರೆಟ್ ಸರ್ವಿಸ್‌ನ ಏಜೆಂಟ್ ಆಗುವುದಾಗಿತ್ತು. ಟ್ರಂಪ್ ಅಮೆರಿಕದ ಅಧ್ಯಕ್ಷರಾಗುವ ಮೊದಲೇ ಇದು ತಿಳಿದಿತ್ತು. ಟ್ರಂಪ್ ಚುನಾವಣೆಯಲ್ಲಿ ಗೆದ್ದ ನಂತರ, ಡಿಜೆ ಡೇನಿಯಲ್   ಕೊನೆಯ ಆಸೆಯನ್ನು ಈಡೇರಿಸುವುದಾಗಿ ಘೋಷಿಸಿದರು. ತಮ್ಮ ಮಾತಿನಂತೆ, ಟ್ರಂಪ್ ಡಿಜೆ ಡೇನಿಯಲ್ ಅವರನ್ನು ಗೌರವಾನ್ವಿತ ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿ ನೇಮಿಸಿದ್ದಾರೆ.