ಎನ್.ಆರ್.ಪುರ ತಾಲೂಕು ಸಾರ್ಯ ಗ್ರಾಮದ ಮಾವಿನಕುಡಿಗೆಯಲ್ಲಿ ಹೆಬ್ಬಾವನ್ನು ಉರಗ ತಜ್ಞ ಪಿ.ಜಿ.ಹರೀಂದ್ರ, ವನಪಾಲಕ ರಾಘವೇಂದ್ರ, ಗ್ರಾಮಸ್ಥರು ಸೆರೆಹಿಡಿದರು. 
ನ್ಯೂಸ್

ಸಾರ್ಯ ಗ್ರಾಮದಲ್ಲಿ ನಾಯಿಯನ್ನು ನುಂಗಿ ಒದ್ದಾಡಿದ 13 ಅಡಿ ಉದ್ದದ ಹೆಬ್ಬಾವು

ಎನ್.ಆರ್.ಪುರ: ಹೊನ್ನೇಕೊಡಿಗೆ ಗ್ರಾಪಂ ವ್ಯಾಪ್ತಿಯ ಸಾರ್ಯ ಗ್ರಾಮದ ಮಾವಿನಕುಡಿಗೆ ಮೋಹನ ಗೌಡ ಎಂಬುವರ ಮನೆ ಸಮೀಪ ಬಂದ 13 ಉದ್ದದ ಹೆಬ್ಬಾವು ನಾಯಿಯನ್ನು ನುಂಗಿದೆ.

ಶನಿವಾರ ಬೆಳಗ್ಗೆ ನಾಯಿ ಬೊಗಳುವ ಶಬ್ದ ಮನೆಯವರಿಗೆ ಕೇಳಿದೆ. ನಂತರ ನಾಯಿ ಬೊಗಳುವುದನ್ನು ನಿಲ್ಲಿಸಿದೆ. ಮನೆಯವರು ಹೊರಗಡೆ ಬಂದಾಗ ಮನೆಯಿಂದ 50 ಅಡಿ ದೂರದ ಕಾಲುವೆಯಲ್ಲಿ ಹೆಬ್ಬಾವು ಕಂಡಿತು. ಹೆಬ್ಬಾವಿನ ಬಾಯಲ್ಲಿ ನಾಯಿ ಬಾಲ ಮಾತ್ರ ಕಾಣುತ್ತಿತ್ತು. ತಕ್ಷಣ ಮನೆಯವರು ವನಪಾಲಕ ರಾಘವೇಂದ್ರ ಅವರಿಗೆ ತಿಳಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಉರಗ ತಜ್ಞ ಪಿ.ಜಿ.ಹರೀಂದ್ರ ಅವರನ್ನು ಕರೆಸಿದರು. ಪಿ.ಜಿ.ಹರೀಂದ್ರ ಹೆಬ್ಬಾವನ್ನು ಹಿಡಿದು ಅಭಯಾರಣ್ಯಕ್ಕೆ ಬಿಟ್ಟು ಬಂದರು.