ನ್ಯೂಸ್

ಬುಡಕಟ್ಟು ವ್ಯಕ್ತಿಯ ಹತ್ಯೆ ಪ್ರಕರಣ; 13 ಮಂದಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಪಾಲಕ್ಕಾಡ್​: ಅಂಗಡಿ ಒಂದರಲ್ಲಿ ಆಹಾರ ಪದಾರ್ಥ ಕಳ್ಳತನ ಮಾಡಿದ್ಧಾರೆ ಎಂದು ಆರೋಪಿಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು 13 ಮಂದಿ ಆರೋಪಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಅಟ್ಟಪಡಿ ನಿವಾಸಿ ಮಧು ಎಂಬುವವರನ್ನು ಗುಂಪೊಂದು 22 ಫೆಬ್ರವರಿ 2018ರಲ್ಲಿ ಹೊಡೆದು ಕೊಂದಿತ್ತು. ಪೊಲೀಸ್​ ತನಿಖೆ ಬಳಿಕ ಐದು ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ಭಾಗಿಯಾಗಿದ್ದ 13 ಮಂದಿಯನ್ನು ದೋಷಿ ಎಂದು ಪರಿಗಣಿಸಿ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಪ್ರಮಾಣವನ್ನು ನ್ಯಾಯಮೂರ್ತಿ ಕೆ.ಎಂ.ರತೀಶ್​ ಕುಮಾರ್​ ಪ್ರಕಟಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಕೀಲರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು. 7 ವರ್ವ ಶಿಕ್ಷೆಗೆ ಗುರಿಯಾಗಿಸಿರುವ ಬಗ್ಗೆ ಬೇಸರವಿದೆ ಈ ಕುರಿತು ರಾಜ್ಯ ಸರ್ಕಾರ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುವ ವಿಶ್ವಾಸವಿದೆ ಎಂದು ಪಬ್ಲಿಕ್​ ಪ್ರಾಸಿಕ್ಯೂಟರ್​ ರಾಜೇಶ್​ ಮೆನನ್ ಹೇಳಿದ್ಧಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಧು ಸಹೋದರಿ ಆರೋಪಿಗಳಿಗೆ ನೀಡಿರುವ ಶಿಕ್ಷೆ ನಮಗೆ ತೃಪ್ತಿಕರವಾಗಿಲ್ಲ. ನಿಜವಾಗಿ ಏನಾಗಿದೆ ಎಂಬುದು ನ್ಯಾಯಾಲಯಕ್ಕೆ ತಿಳಿದು ಬಂದಿಲ್ಲ. ನ್ಯಾಯಾಲಯವು ನಮ್ಮ ಹಿತಾಸಕ್ತಿಗಳನ್ನು ಕಾಪಾಡುತದೆಂದು ಉದ್ದೇಶಿಸಲಾಗಿತ್ತು. ಆದರೆ, ಅದು ನಡೆದಿಲ್ಲ ಎಂದು ತೀರ್ಪಿನ ಕುರಿತು ಮಧು ಸಹೋದರಿ ಹೇಳಿದ್ದಾರೆ.