ಪಟನಾ: ಬ್ಯಾಂಕ್ ಲಾಕರ್ಗಳ ಬಗ್ಗೆ ಕೇಳಿದ್ದೇವೆ. ಕಾಳಧನವನ್ನು ಶೇಖರಿಸಿಡಲು ಕೆಲವರು ಲಾಕರ್ ಬಳಸುತ್ತಿದ್ದ ಬಗ್ಗೆ ಈ ಹಿಂದೆಯೂ ವರದಿಯಾಗಿತ್ತು. ಆದರೆ, ಈ ಲಾಕರ್ ಎಲ್ಲದಕ್ಕಿಂತ ವಿಶೇಷವಾದುದು!
ಬಿಹಾರದ ತೈಮೂರ್ ಜಿಲ್ಲೆಯಲ್ಲಿ ಪೊಲೀಸರು ಎಂದಿನಂತೆ ಮೊನ್ನೆ ಗುರುವಾರವೂ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯಲ್ಲಿ ತೊಡಗಿದ್ದರು. ಹೋಲಿ ಹಬ್ಬಕ್ಕೆ ಪೂರ್ವಭಾವಿಯಾಗಿ ಇಂತಹ ತಪಾಸಣೆ ಅಲ್ಲಿ ಸರ್ವೇ ಸಾಮಾನ್ಯ. ಆಗ ಕಾರೊಂದರಲ್ಲಿ ಭಾರಿ ಪ್ರಮಾಣದ ಮದ್ಯಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ಕಾರಣ, ತಪಾಸಣೆ ಬಿಗಿಗೊಳಿಸಿದ್ದರು.
ನೀಲಿ ಬಣ್ಣದ ಕಾರು ಅನುಮಾನಾಸ್ಪದವಾಗಿ ಆಗಮಿಸಿದ್ದು, ತಪಾಸಣೆಗೆ ಒಳಪಡಿಸಿದಾಗ ಅದರ ಚಾಲಕ ಮತ್ತು ಜತೆಗಿದ್ದಾತ ವಿಚಲಿತರಾಗಿದ್ದರು. ಅವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿ, ಕಾರನ್ನು ತಪಾಸಣೆಗೆ ಒಳಪಡಿಸಿದಾಗ ಪೊಲೀಸರಿಗೆ ಶಾಕ್ ಕಾದಿತ್ತು.

ಕಾರಿನ ಸೀಟಿನಲ್ಲಿ ದೊಡ್ಡದೊಂದು ಲಾಕರ್ ಇತ್ತು. ಅದರೊಳಗೆ 500 ರೂಪಾಯಿ ಮತ್ತು 2,000 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳೇ ಇದ್ದವು. ಎಲ್ಲವನ್ನೂ ಹೊರಗೆ ತೆಗೆದು ಲೆಕ್ಕ ಹಾಕಿದ ಪೊಲೀಸರಿಗೆ ಸಿಕ್ಕಿದ್ದು ಬರೋಬ್ಬರಿ 125 ಕೋಟಿ ರೂಪಾಯಿ! ಈ ಹಣ ಎಲ್ಲಿಂದ ಎಲ್ಲಿಗೆ ಸಾಗಿಸುತ್ತಿದ್ದರು, ಯಾರಿಗೆ ಸೇರಿದ್ದು ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಾಗಿದ್ದು, ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. (ಏಜೆನ್ಸೀಸ್)