ನ್ಯೂಸ್

12 ಕೆಜಿ ಗಾಂಜಾ ಜಫ್ತಿ

ಪಿಎಸ್‍ಐ ಮಂಜುಳ, ಸಿಬ್ಬಂದಿಗಳಾದ ಮುನಿಸ್ವಾಮಿ, ಚಲಪತಿ, ರೇಣುಪ್ರಸಾದ್, ಮಂಜುನಾಥ್ ಚಾಲಕ ವೆಂಕಟರಾಮ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಳಬಾಗಿಲು ತಾಲೂಕಿನ ಬನಹಳ್ಳಿ ಗ್ರಾಮದ ರೆಡ್ಡಪ್ಪ(45) ಬಂಧಿತ ಆರೋಪಿ. ಈತ ಅನೇಕ ದಿನಗಳಿಂದ ಮನೆಯಲ್ಲೇ ಗಾಂಜಾವನ್ನು ದಾಸ್ತಾನು ಮಾಡಿಕೊಂಡು ಪ್ಯಾಕೇಟ್‍ಗಳನ್ನಾಗಿ ಮಾಡಿ ಹೊರಗಡೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿ ಆರೋಪಿ ಹಾಗೂ ಮಾಲನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಮಾದಕ ದ್ರವ್ಯ ನಿಗ್ರಹದಳದ ಸರ್ಕಲ್‍ಇನ್ಸ್‍ಪೇಕ್ಟರ್ ಎಸ್.ಆರ್ ಜಗದೀಶ್ ನೇತೃತ್ವದ ತಂಡ 12 ಕೆಜಿಎಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ಸುದ್ದಿಜಾಲ ಮುಳಬಾಗಿಲು