ನ್ಯೂಸ್

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ. 21ರಂದು

ರಾಣೆಬೆನ್ನೂರ: ಪತಂಜಲಿ ಯೋಗಪೀಠ ಹರಿದ್ವಾರ, ಕೆಎಲ್​ಇ ಸಂಸ್ಥೆಯ ರಾಜರಾಜೇಶ್ವರಿ ಅಂಗಸಂಸ್ಥೆಗಳು, ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಜೂ. 21ರಂದು ಬೆಳಗ್ಗೆ 5.30ಕ್ಕೆ ನಗರದ ರಾಜ ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುವುದು ಎಂದು ಯೋಗ ಸಮಿತಿಯ ಜಿಲ್ಲಾಧ್ಯಕ್ಷ ರವಿ ಬಿಜಾಪುರ ತಿಳಿಸಿದರು.

ನಗರದ ಆದಿಶಕ್ತಿ ದೇವಸ್ಥಾನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈ ರಾಮಕೃಷ್ಣ ಮಿಶನ್​ ಆಶ್ರಮದ ದಯಾಧಿಪಾನಂದಜಿ, ಸ್ಥಳಿಯ ರಾಮಕೃಷ್ಣ ವಿವೇಕಾನಂದಾಶ್ರಮದ ಪ್ರಕಾಶಾನಂದಜಿ ಮಹಾರಾಜ್​ ಸಾನ್ನಿಧ್ಯ ವಹಿಸುವರು. ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ಮಾಲತಿಅಕ್ಕ, ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​, ಡಿವೈಎಸ್ಪಿ ಲೋಕೇಶ ಜೆ., ಬಿಇಒ ಶ್ಯಾಮಸುಂದರ ಅಡಿಗ, ಕೆಎಲ್​ಇ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್​ ವಿ.ಪಿ. ಲಿಂಗನಗೌಡ್ರ, ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಮತ್ತಿತರರು ಉಪಸ್ಥಿತರಿರುವರು ಎಂದರು.

ಪ್ರಮುಖರಾದ ಆರ್​.ಎನ್​. ರಾಠೋಡ, ಕೆ.ಸಿ. ಕೋಮಲಾಚಾರ್ಯ, ಆರ್​.ಬಿ. ಪಾಟೀಲ, ಸರೋಜಾ ಸುಣಗಾರ, ಪ್ರಕಾಶ ಚಂದ್ರಶೇಖರಮಠ, ಗಿರಿಜಾ ಸಾಳೇರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.