ಗಂಗಾವತಿ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದಿಂದ ಶ್ರದ್ಧಾಂಜಲಿ ಸಭೆ ಶುಕ್ರವಾರ ನಡೆಯಿತು. ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಶರಣಪ್ಪ ಸಜ್ಜಿಹೊಲ, ಜಿಲ್ಲಾಧ್ಯಕ್ಷ ಕನಕಪ್ಪ ಮಳಗಾವಿ, ವಿವಿಧ ಘಟಕದ ಪದಾಧಿಕಾರಿಗಳಾದ ವೆಂಕಟೇಶ, ಚಂದ್ರಶೇಖರ ವಗ್ಗೆ, ಶರ್ೀ ಸಾಬ್ ಇತರರಿದ್ದರು. 
ನ್ಯೂಸ್

11 ಜನರ ಸಾವಿಗೆ ಸರ್ಕಾರವೇ ಹೊಣೆ

ಗಂಗಾವತಿ: ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಮೃತಪಟ್ಟವರಿಗೆ ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದಿಂದ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಯಿತು. ದೀಪ ಪ್ರಜ್ವಂಲನದ ಜತೆಗೆ ಮೌನಾಚರಣೆಯೊಂದಿಗೆ ಮೃತರ ಆತ್ಮಕಕ್ಕೆ ಶಾಂತಿ ಕೋರಲಾಯಿತು.

ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಶರಣಪ್ಪ ಸಜ್ಜಿಹೊಲ ಮಾತನಾಡಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ವಿಜಯೋತ್ಸವ ಆಚರಿಸಿರುವುದು ಸರಿಯಲ್ಲ. 11 ಜನರ ಸಾವಿಗೆ ಸರ್ಕಾರವೇ ಹೊಣೆಯಾಗಿದೆ. ಭದ್ರತಾ ಮತ್ತು ಗುಪ್ತಚರ ಇಲಾಖೆ ಲೋಪವಿದೆ. ಮತ ಕುಟುಂಬದವರಿಗೆ ತಲಾ 50 ಲಕ್ಷ ರೂ. ಪರಿಹಾರ ಸರ್ಕಾರ ೋಷಿಸಬೇಕು. ದುರ್ಘಟನೆ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಕನಕಪ್ಪ ಮಳಗಾವಿ, ವಿವಿಧ ಘಟಕದ ಪದಾಧಿಕಾರಿಗಳಾದ ವೆಂಕಟೇಶ, ಚಂದ್ರಶೇಖರ ವಗ್ಗೆ, ಶರ್ೀ ಸಾಬ್, ಭೂಪತಿ ರಾಜ ದೊರೆ, ವಿರುಪಣ್ಣ,ನಾಗೇಶ, ಬಸಮ್ಮ, ಶಿವರಾಜ ಆರಾಳ್, ನಾಗರಾಜ ಕುಷ್ಟಗಿ, ಹರ್ಷವರ್ಧನ ಆರಾಳ್ ಇತರರಿದ್ದರು.