ನ್ಯೂಸ್

ಶಾರೂಖ್​ ಖಾನ್ ಭೇಟಿಯಾಗಲು ಮನೆ ಬಿಟ್ಟು ಹೊರಟ ಬಾಲಕ! Shah Rukh Khan​  ನಮ್ಮ  ಅಪ್ಪನಿಗೂ ಬುದ್ಧಿ ಕಲಿಸಬೇಕು..

ಮಧ್ಯಪ್ರದೇಶ : ( Shah Rukh Khan) 11 ವರ್ಷದ ಬಾಲಕ ಬಾಲಿವುಡ್​​ನ ಸ್ಟಾರ್​ ನಟ ಶಾರೂಖ್​ ಖಾನ್​ರ ಅಪ್ಪಟ ಅಭಿಮಾನಿ. ಮಧ್ಯಪ್ರದೇಶದ ಭೋಪಾಲ್​ನ 11 ವರ್ಷದ ಬಾಲಕ ಶಾರುಖ್ ಖಾನ್ ಮಾಡಿದಂತೆ, ಯಾವಾಗ ನೋಡಿದ್ರೂ, ಅದೇ ಸ್ಟೈಲ್​​ನಲ್ಲಿ ಫೈಟ್ ಮಾಡೋದು, ಆ್ಯಕ್ಟ್ ಮಾಡೋದು, ಡೈಲಾಗ್ ಹೇಳೋದನ್ನ ಮಾಡ್ತಿದ್ದನಂತೆ. ಇದೀಗ ಶಾರೂಖ್​ ಅವರ ಈ ಪುಟ್ಟ ಅಭಿಮಾನಿ ಮಾಡಿದ ಕೆಲಸ ಸಖತ್​ ಸುದ್ದಿಯಾಗಿದೆ.

ಬಾಲಕ, ನಾನ್ಯಾಕೆ ಶಾರೂಖ್ ಅವರಂತೆ ಸ್ಟಂಟ್ಸ್​ ಮಾಡಬಾರದು ಅಂತ ಎರಡ್ಮೂರು ಸರಿ, ಜವಾನ್ ಸಿನಿಮಾ ನೋಡಿದ್ದ. ಯಾವಾಗ ಸ್ಟಂಟ್ ಮಾಡ್ತಿದ್ನೋ, ಆಗ ಆ ಬಾಲಕನ ತಂದೆಯಿಂದ ಬೈಗುಳ, ಇನ್ನೊಂದು ಕಡೆ ಏಟು. ಇದ್ರಿಂದ ಹೆಚ್ಚಾಗಿ ಬೇಜಾರಾಗಿದ್ದನು. ಅಪಾಯಕಾರಿ ಸ್ಟಂಟ್​​ ಮಾಡುತ್ತಿದ್ದನು ಇದನ್ನು ಗಮನಿಸಿದ ಸ್ಥಳೀಯರು ಈತನ ಕುರಿತಾಗಿ ತಂದೆಗೆ ದೂರುತ್ತಿದ್ದರು. ಕೋಪ ಮಾಡಿಕೊಂಡು ಆ ಹುಡುಗನಿಗೆ ಹೊಡೆದಿದ್ದಾನೆ. ಆಗ ಅಪ್ಪನ ವಿರುದ್ಧ ಮಗ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾನೆ.

ಯಾರ ಸ್ಟಂಟ್ಸ್​ ನೋಡಿ ಇನ್ಸ್​ಪೈರ್ ಆದ್ನೋ, ಅದೇ ಶಾರೂಖ್​​ ಖಾನ್​​ಗೆ ಅಪ್ಪನ ವಿರುದ್ಧ ದೂರು ಕೊಡೋಣ ಅಂತ ತೀರ್ಮಾನ ಮಾಡಿಬಿಟ್ಟಿದ್ದಾನೆ. ಯಾರಿಗೂ ಹೇಳದೆ, ಕೇಳದೆ ಮನೆ ಬಿಟ್ಟು ಬಂದ್ ಬಿಟ್ಟಿದ್ದಾನೆ. ಉತ್ತರಪ್ರದೇಶದಿಂದ ಮುಂಬೈಗೆ ಹೊರಡೋ ಟ್ರೈನ್​​​ನ ಹತ್ತಿದ್ದಾನೆ. ಆ ರೈಲು, ಮಧ್ಯಪ್ರದೇಶದ ಭೋಪಾಲ್‌ನ ಸಂತ ಹಿರ್ದಾರಾಂ ಸಿಟಿ ರೈಲ್ವೆ ಸ್ಟೇಷನ್​​ಗೆ ಬಂದಾಗ, ರೈಲ್ವೆ ಪೊಲೀಸರು ಸುಮಾರು ಹೊತ್ತು, ಆ ಬಾಲಕನನ್ನ ಗಮನಿಸಿದ್ದಾರೆ.

ಆ ಬಾಲಕನನ್ನು ವಿಚಾರಿಸಿದ ಪೊಲೀಸ್ರು, ಶಾರೂಖ್​ ಖಾನ್​ ಭೇಟಿಯಾಗೋದಕ್ಕೆ ಮುಂಬೈಗೆ ಹೋಗ್ತಿದೀನಿ. ನನ್ನ ಅಪ್ಪ ನನಗೆ ಹೊಡೆದಿದ್ದಾರೆ. ಬೈದಿದ್ದಾರೆ. ಅದಕ್ಕೋಸ್ಕರ ಕಂಪ್ಲೇಂಟ್ ಕೊಡೋಕೆ ಹೋಗ್ತಿದ್ದಿನಿ ಅಂತ ಬಾಲಕ ಹೇಳಿದ್ದಾನೆ. ಆಮೇಲೆ ಆ ಬಾಲಕನನ್ನ ವಶಕ್ಕೆ ಪಡೆದ ಪೊಲೀಸ್ರು, ಈ ಬಗ್ಗೆ ಬಾಲಕನ ತಂದೆಗೆ ಮಾಹಿತಿ ಕೊಟ್ಟಿದ್ದಾರೆ. ಮನೆಬಿಟ್ಟು ಬಂದ ಮಗುವನ್ನು ಪೊಲೀಸರು ರಕ್ಷಣೆ ಮಾಡಿ, ಪೋಷಕರಿಗೆ ಒಪ್ಪಿಸಿದ್ದಾರೆ.

ಸಿನಿಮಾದಲ್ಲಿ ಶಾರೂಖ್​ ಖಾನ್​ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋ ರೀತಿ, ತನ್ನನ್ನು ಹೊಡೆದ ಅಪ್ಪನಿಗೂ ಬುದ್ಧಿ ಕಲಿಸಬೇಕು ಅಂತ ಬಾಲಕ ಮುಂದಾಗಿದ್ದ ಅಂತ ಪೊಲೀಸರು ಹೇಳಿದ್ದಾರೆ.