Tamil fishermen: ಕೋಡಿಯಕ್ಕರೈ ಸಮುದ್ರದ ಪೂರ್ವ ತೀರದಲ್ಲಿ ಮೀನುಗಾರಿಗೆ ನಡೆಸುತ್ತಿದ್ದ 11 ತಮಿಳು ಮೀನುಗಾರರ ಮೇಲೆ ಶ್ರೀಲಂಕಾದ ಪ್ರಜೆಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ದೋಣಿಯಲ್ಲಿದ್ದ ಹಲವು ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು ಸೋಮವಾರ(ಅ. 06) ವರದಿಯಾಗಿದೆ.
ಭಾನುವಾರ ಮಧ್ಯಾಹ್ನ 2 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದಾಗ ಘಟನೆ ನಡೆದಿದೆ. ತಮಿಳುನಾಡಿನ ಎಸ್. ಚಂದ್ರಬೋಸ್ ಮತ್ತು ಎಂ. ಶಶಿಕುಮಾರ್ ಒಡೆತನದ ಎರಡು ಫೈಬರ್ ದೋಣಿಗಳ ಮೇಲೆ ದಾಳಿ ಮಾಡಲಾಗಿದೆ. ದೋಣಿಯಲ್ಲಿದ್ದ ನಾಗಪಟ್ಟಣಂನ ನಂಬಿಯಾರ್ ನಗರದ ಹನ್ನೊಂದು ಮೀನುಗಾರರು ಗಾಯಗೊಂಡಿದ್ದಾರೆ. ದೋಣಿಯಲ್ಲಿದ್ದ ಎಂಜಿನ್‌ಗಳು, ಜಿಪಿಎಸ್ ಉಪಕರಣಗಳು, ಚಿನ್ನದ ಸರಪಳಿಗಳು, ವಾಕಿ-ಟಾಕಿಗಳು, ಮೀನುಗಾರಿಕೆ ಬಲೆಗಳು ಮತ್ತು ಅವರು ಹಿಡಿದ ಮೀನುಗಳನ್ನು ಶ್ರೀಲಂಕಾ ಪ್ರಜೆಗಳು ಸುಲಿಗೆ ಮಾಡಿದ್ದಾರೆ.
ಸಿ.ವಿಘ್ನೇಶ್, ಸಿ.ವಿಮಲ್, ಸಿ.ಸುಕುಮಾರ್, ವಿ.ತಿರುಮುರುಗನ್, ವಿ.ಮುರುಗನ್, ಬಿ.ಅರುಣ್, ಎಂ.ಶಶಿಕುಮಾರ್, ಎಸ್.ಉದಯಶಂಕರ್, ಎಸ್.ಶಿವಶಂಕರ್, ಎಂ.ಕಿರುಬ, ಆರ್.ಕಮಲೇಶ್ಗೆ ಗಾಯಗೊಂಡ ಮೀನುಗಾರರು. ಇತರ ಮೀನುಗಾರರ ಸಹಾಯದಿಂದ ದಡಕ್ಕೆ ತಲುಪಿದ್ದು, ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕರಾವಳಿ ಭದ್ರತಾ ಸಿಬ್ಬಂದಿ, ಶ್ರೀಲಂಕಾದ ಎಂಟು ಜನರು ತಂಡ ಎರಡು ದೋಣಿಗಳಲ್ಲಿ ಬಂದು ಮೀನುಗಾರರ ಹಡಗನ್ನು ಹತ್ತಿ, ಕಬ್ಬಿಣದ ರಾಡ್‌ಗಳು, ಮರದ ಕೋಲುಗಳು ಮತ್ತು ಚಾಕುಗಳು ಸೇರಿದಂತೆ ಆಯುಧಗಳಿಂದ ಅವರ ಮೇಲೆ ದಾಳಿ ಮಾಡಿದೆ. ಹಲ್ಲೆ ಬಳಿಕ ಹೊರಡುವ ಮೊದಲು ದೋಣಿಯಲ್ಲಿದ್ದ ಮೀನು ಸೇರಿ ಎಲ್ಲಾ ವಸ್ತುಗಳನ್ನ ಸುಲಿಗೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)