ಬಂದಳಿಕೆಯ ಶ್ರೀ ಬನಶಂಕರಿ ಅಮ್ಮ. 
ನ್ಯೂಸ್

10ರಿಂದ ಶೀ ಬನಶಂಕರಿ ಜಾತ್ರೋತ್ಸವ

ಶಿವಮೊಗ್ಗ: ಶಿಕಾರಿಪುರ ಸಮೀಪದ ಬಂದಳಿಕೆ ಕ್ಷೇತ್ರದ ಶ್ರೀ ಬನಶಂಕರಿ ಅಮ್ಮನ ಜಾತ್ರಾ ಮಹೋತ್ಸವ ಜ.10ರಿಂದ 16ರವರೆಗೆ ಜರುಗಲಿದೆ. ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಹಿರೇಮಾಗಡಿಯ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಕಡೇನಂದಿಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಜರುಗಲಿದೆ.

ಜ.10ರ ಸಂಜೆ ಅಮ್ಮನವರಿಗೆ ಕಂಕಣಧಾರಣೆ, 12ರಂದು ಬೆಳಗ್ಗೆ ಅಭಿಷೆೇಕ ಮತ್ತು ಅಮ್ಮನವರ ಪೂಜಾ ಕಾರ್ಯಕ್ರಮ ನೆರವೇರಲಿದೆ. 13ಕ್ಕೆ ಬೆಳಗ್ಗೆ ಹೂವಿನ ರಥೋತ್ಸವ, 14ರ ಬೆಳಗ್ಗೆ ದೊಡ್ಡ ರಥೋತ್ಸವ ಜರುಗಲಿದೆ. ಸಂಜೆ ಅಮ್ಮನವರಿಗೆ ಓಕುಳಿ ಕಾರ್ಯಕ್ರಮವಿದೆ.

14ರಂದು ಸಭಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ, ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಭಾಗವಹಿಸುವರು.