ನ್ಯೂಸ್

10, 12 ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ; ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂದ ಸಚಿವರು

Chamarajanagar

ಮುಂಬೈ : ಕರೊನಾ ಪರಿಸ್ಥಿತಿಯು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು 10ನೇ ತರಗತಿ ಮತ್ತು 12ನೇ ತರಗತಿಯ ಸ್ಟೇಟ್​ ಬೋರ್ಡ್​ ಪರೀಕ್ಷೆಗಳನ್ನು ಮುಂದೂಡಿದೆ. ರಾಜ್ಯದಲ್ಲಿ 12ನೇ ತರಗತಿಯ ಪರೀಕ್ಷೆಗಳನ್ನು ಮೇನಲ್ಲಿ ಮತ್ತು 10ನೇ ತರಗತಿಯ ಪರೀಕ್ಷೆಗಳನ್ನು ಜೂನ್​ನಲ್ಲಿ ನಡೆಸಲಾಗುವುದು ಎಂದು ರಾಜ್ಯದ ಶಿಕ್ಷಣ ಸಚಿವರಾದ ವರ್ಷ ಗಾಯಕ್​ವಾಡ್ ಇಂದು ತಿಳಿಸಿದ್ದಾರೆ.

"ಪ್ರಸ್ತುತ ಸನ್ನಿವೇಶವು ಪರೀಕ್ಷೆ ನಡೆಸಲು ಪೂರಕವಾಗಿಲ್ಲ. ನಿಮ್ಮ ಆರೋಗ್ಯವೇ ನಮ್ಮ ಆದ್ಯತೆಯಾಗಿದೆ" ಎಂದು ಟ್ವಿಟರ್​ನಲ್ಲಿ ವಿಡಿಯೋ ಸಂದೇಶ ಶೇರ್ ಮಾಡಿರುವ ಗಾಯಕ್​ವಾಡ್​ ಅವರು, ಬದಲಾಗುವ ಪರಿಸ್ಥಿತಿಯನ್ನು ಗಮನಿಸಿ ನಿರ್ದಿಷ್ಟ ಪರೀಕ್ಷಾ ದಿನಾಂಕವನ್ನು ನಂತರದಲ್ಲಿ ಘೋಷಿಸಲಾಗುವುದು ಎಂದಿದ್ದಾರೆ.

"ಸಿಬಿಎಸ್ಇ​​, ಐಸಿಎಸ್​​ಸಿ, ಐಬಿ, ಕೇಂಬ್ರಿಡ್ಜ್ ಬೋರ್ಡ್​ಗಳಿಗೂ ನಾವು ಅವರ ಪರೀಕ್ಷಾ ದಿನಾಂಕಗಳನ್ನು ಮತ್ತೆ ಪರಿಗಣಿಸುವಂತೆ ಪತ್ರ ಬರೆಯಲಿದ್ದೇವೆ" ಎಂದು ಸಚಿವೆ ಗಾಯಕ್​ವಾಡ್​ ಹೇಳಿದ್ದಾರೆ. (ಏಜೆನ್ಸೀಸ್)