ನ್ಯೂಸ್

1,097 ಕೋವಿಡ್ ಸೋಂಕಿತರು ಗುಣಮುಖ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 341 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಈವರೆಗೆ ಒಟ್ಟು 71,817 ಜನರಿಗೆ ಸೋಂಕು ತಗುಲಿದಂತಾಗಿದ್ದು, 8 ಸೋಂಕಿತರು ಮೃತಪಟ್ಟು ಒಟ್ಟು ಸೋಂಕಿಗೆ ಬಲಿ ಆದವರ ಸಂಖ್ಯೆ 653ಕ್ಕೆ ಏರಿದೆ.

ಬುಧವಾರ ಆರೋಗ್ಯ ಇಲಾಖೆ ನೀಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಬೆಳಗಾವಿ ತಾಲೂಕಿನಲ್ಲಿ 110, ಅಥಣಿ-22, ಬೈಲಹೊಂಗಲ-38, ಚಿಕ್ಕೋಡಿ-57, ಗೋಕಾಕ-14, ಹುಕ್ಕೇರಿ-34, ಖಾನಾಪುರ-31, ರಾಯಬಾಗ-21, ಸವದತ್ತಿಯ 14 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನೂ 3,424 ಜನರ ಕೋವಿಡ್ ತಪಾಸಣೆ ವರದಿ ಬರಬೇಕಿದೆ. ಇನ್ನು ಸೋಂಕಿನಿಂದ ಗುಣಮುಖರಾಗಿ ಬುಧವಾರ 1,097 ಜನ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 63,054ಕ್ಕೆ ಏರಿದೆ. 8,100 ಸೋಂಕಿತರು ಜಿಲ್ಲಾಸ್ಪತ್ರೆ ಸೇರಿ ವಿವಿಧ ತಾಲೂಕಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

33 ವಾಹನ ಜಪ್ತಿ: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಂಚರಿಸಿದ 33 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಮಾಸ್ಕ್ ಧರಿಸದ 243 ಜನರ ವಿರುದ್ಧ ಕ್ರಮ ಜರುಗಿಸಿದ್ದಾರೆ.