Bandi Sanjay Kumar: ತಿರುಮಲ ತಿರುಪತಿ ದೇವಸ್ಥಾನಗಳಲ್ಲಿ ಸುಮಾರು 1,000 ಹಿಂದೂಯೇತರರು ವೆಂಕಟೇಶ್ವರ ಸ್ವಾಮಿಯಲ್ಲಿ ನಂಬಿಕೆ ಇಡದೆ, ಸನಾತನ ಧರ್ಮವನ್ನು ಪಾಲಿಸದೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಶುಕ್ರವಾರ (ಜು.11) ಆರೋಪಿಸಿದ್ದಾರೆ.
ಇದನ್ನೂ ಓದಿ: 1 ಸಿನಿಮಾ, 150 ಕಟ್ಸ್! ಭಾರೀ ವಿವಾದದಲ್ಲಿ ‘ಉದಯಪುರ್ ಫೈಲ್ಸ್’, ರಿಲೀಸ್ ನಿರ್ಧಾರ ಕೇಂದ್ರದ ಕೈಯಲ್ಲಿ | Udaipur Files
ಈ ಹಿಂದೆ ಹಿಂದೂಗಳಲ್ಲದವರನ್ನು ನೇಮಿಸಿಕೊಂಡಿದ್ದರೂ, ಏಕೆ ಬದಲಾವಣೆಯಾಗಿಲ್ಲ?" ಎಂದು ಪ್ರಶ್ನಿಸಿರುವ ಸಂಜಯ್ ಕುಮಾರ್, "ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಹಿಂದೂಯೇತರರು ಅವರ ಮೇಲಿನ ನಂಬಿಕೆಯನ್ನು ಘೋಷಿಸಬೇಕು. ಆದರೆ ಸ್ವಾಮಿಯನ್ನು ನಂಬದ ಸುಮಾರು 1000 ಹಿಂದೂಯೇತರ ಉದ್ಯೋಗಿಗಳು ಟಿಟಿಡಿ ಉದ್ಯೋಗಗಳಲ್ಲಿ ಹೇಗೆ ಮುಂದುವರಿಯುತ್ತಿದ್ದಾರೆ?" ಎಂದು ಕೇಳಿದರು.
ಟಿಟಿಡಿಯ ಉದ್ಯೋಗಿಯಾಗಿದ್ದರೂ ನಿಯಮಿತವಾಗಿ ಚರ್ಚ್‌ಗೆ ಹಾಜರಾಗುತ್ತಿರುವುದು ಕಂಡುಬಂದ ನಂತರ ಒಬ್ಬ ವ್ಯಕ್ತಿಯನ್ನು ಅಮಾನತುಗೊಳಿಸಲಾದ ಇತ್ತೀಚಿನ ಪ್ರಕರಣವನ್ನು ಅವರು ಈ ವೇಳೆ ನೆನಪಿಸಿಕೊಂಡರು. (ಏಜೆನ್ಸೀಸ್)