ಸಮಯ್ 
ನ್ಯೂಸ್

ಎವರಾನ್ ಸ್ಕೂಲ್‌ಗೆ ಶೇ.100 ಫಲಿತಾಂಶ

ಶಿವಕುಮಾರ ಎಸ್.ಪಿ.

ಸೊರಬ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಕೋಟಿಪುರದ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ವಿದ್ಯಾರ್ಥಿ ಎಚ್.ಎಸ್.ಸಮಯ್ (623), ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಖಿತಾ (623) ಅಂಕ ಪಡೆಯುವ ಮೂಲಕ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಮೂರನೆ ರ‌್ಯಾಂಕ್ ಪಡೆದಿದ್ದಾರೆ.

ಸ್ವಾಮಿ ವಿವೇಕಾನಂದ ಶಾಲೆಯ ಸಿರಿಗೌರಿ ಎಸ್.ಡಿ. (622), ಕೆ.ಬಿ.ಅಮೂಲ್ಯಾ(621) ಪಡೆಯುವ ಮೂಲಕ ತಾಲೂಕಿಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಮೂರು ಸ್ಥಾನಗಳನ್ನು ಉಳಿಸಿಕೊಂಡು ರಾಜ್ಯದಲ್ಲಿ ಮೂರು, ನಾಲ್ಕು ಹಾಗೂ ಐದನೇ ರ‌್ಯಾಂಕ್ ಪಡೆದಿದ್ದು, ಈ ಶಾಲೆ 96.55 ಫಲಿತಾಂಶ ದಾಖಲಿಸಿದೆ. ಕನ್ನಡ ವಿಷಯದಲ್ಲಿ 4, ಇಂಗ್ಲಿಷ್ 4, ಹಿಂದಿ 7, ಗಣಿತ 3, ವಿಜ್ಞಾನ 5, ಸಮಾಜ ವಿಜ್ಞಾನ ವಿಷಯದಲ್ಲಿ 6 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

ಆನವಟ್ಟಿಯ ಹೋಬಳಿ ಕೋಟಿಪುರದಲ್ಲಿರುವ ಎವರಾನ್ ರೆಸಿಡೆನ್ಷಿಯಲ್ ಸ್ಕೂಲಿನಲ್ಲಿ 32 ವಿದ್ಯಾರ್ಥಿಗಳಲ್ಲಿ 15 ಮಂದಿ ಶೇ.95, 6 ಮಂದಿ ಶೇ.90ಕ್ಕಿಂತ ಹೆಚ್ಚು, ನಾಲ್ವರು ಶೇ.85ಕ್ಕಿಂತ ಹೆಚ್ಚು ಅಂಕಗಳಿದ್ದಾರೆ. ಉಳಿದವರು ಪ್ರಥಮ ಶೇಣಿಯಲ್ಲಿ ಪಾಸಾಗಿದ್ದಾರೆ. ಗಣಿತದಲ್ಲಿ ಓರ್ವ, ಕನ್ನಡ, ಇಂಗ್ಲಿಷ್, ವಿಜ್ಞಾನ, ಸಮಾಜ ವಿಜ್ಞಾನ ವಿಷಯದಲ್ಲಿ ತಲಾ 3, ಹಿಂದಿಯಲ್ಲಿ 8 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ. ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಮಕ್ಕಳ ಸಾಧನೆಗೆ ಟ್ರಸ್ಟ್‌ನ ಅಧ್ಯಕ್ಷೆ ಸ್ನೇಹಪ್ರಭಾ, ರೆಸಿಡೆನ್ಷಿಯಲ್ ಸ್ಕೂಲ್ ಅಧ್ಯಕ್ಷ ಕಾರ್ತಿಕ್ ಸಾಹುಕಾರ್, ಮುಖ್ಯಸ್ಥರಾದ ಚರಿತಾ ಕಾರ್ತಿಕ್, ಅಧ್ಯಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎರಡು ಸ್ಥಾನ ಕುಸಿತ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕಳೆದ ಬಾರಿ ಎರಡನೇ ಸ್ಥಾನದಲ್ಲಿದ ತಾಲೂಕು ಈ ಬಾರಿ 4ನೇ ಸ್ಥಾನ ಪಡೆದಿದೆ. ಚಂದ್ರಗುತ್ತಿ (ಜೋಳದಗುಡ್ಡೆ) ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆ ಸರ್ಕಾರಿ ಶಾಲೆಗೆ ಶೇ.100 ಫಲಿಂತಾಂಶ ಬಂದಿದೆ. ಉಳಿದಂತೆ ಆನವಟ್ಟಿಯ ಸ್ಯಾಂಥೋಮ್ ಪ್ರೌಢಶಾಲೆ, ನಿಸರಾಣಿ ಆಂಗ್ಲಮಾಧ್ಯಮ ವಿ.ಎಚ್.ಎಸ್.ಪ್ರೌಢಶಾಲೆ ಹಾಗೂ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದಿವೆ.