Terrorist Masood Azhar: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯು ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಈ ದಾಳಿಯನ್ನು ಬೆಂಬಲಿಸಿದೆ ಎಂದು ಬಹಿರಂಗವಾದಾಗ, ಇದಕ್ಕೆ ಪ್ರತೀಕಾರವಾಗಿ, ಭಾರತೀಯ ಸೇನೆಯು ಮೇ 7 ರ ಮಧ್ಯರಾತ್ರಿಯ ನಂತರ 'ಆಪರೇಷನ್ ಸಿಂಧೂರ್' ದಾಳಿಯನ್ನು ಪಾಕಿಸ್ತಾನ ಮೇಲೆ ನಡೆಸಿ ಕೇವಲ 23 ನಿಮಿಷಗಳಲ್ಲಿ ದಾಳಿಯನ್ನು ಯಶಸ್ವಿಯಾಗಿ ಕೊನೆಗೊಳಿಸಿತು. ಇದರಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಭಾರತೀಯ ಸೇನೆಯು ಒಟ್ಟು ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ, ಅದರಲ್ಲಿ 4 ಪಾಕಿಸ್ತಾನದಲ್ಲಿ ಮತ್ತು 5 ಪಿಒಕೆಯಲ್ಲಿವೆ. 8 ಕಿಲೋಮೀಟರ್ ನಿಂದ 100 ಕಿಲೋಮೀಟರ್ ವರೆಗೆ ಕ್ಷಿಪಣಿಗಳ ಮಳೆ ಸುರಿಯಿತು. ಭಾರತದ ದಾಳಿಯಿಂದ ಪಾಕಿಸ್ತಾನದ ನೆಲದಲ್ಲಿದ್ದ ಭಯೋತ್ಪಾದಕ ಗುಂಪುಗಳು ಛಿದ್ರಗೊಂಡವು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಸೂಕ್ತ ಬೆಲೆ ತೆತ್ತನು.
ಆಪರೇಷನ್ ಸಿಂಧೂರ್ ನಲ್ಲಿ ಜೈಶ್ ಭಯೋತ್ಪಾದಕ ಮಸೂದ್ ಅಜರ್ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ. ಮಸೂದ್‌ನ ನಾಲ್ವರು ಆಪ್ತರು ಸಹಚರರು ಸಹ ಸಾವನ್ನಪ್ಪಿದರು. ಮಸೂದ್ ಅಜರ್ ಹೇಳಿಕೆ ನೀಡುವ ಮೂಲಕ ಇದನ್ನು ದೃಢಪಡಿಸಿದ್ದಾನೆ.
ಈ ಸೇಡಿನ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದರು. ಈ ದಾಳಿಯು ಪ್ರಾಥಮಿಕವಾಗಿ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಭಯೋತ್ಪಾದಕ ನೆಲೆಯನ್ನು ಗುರಿಯಾಗಿಸಿಕೊಂಡಿತ್ತು. ಅಂತಾರಾಷ್ಟ್ರೀಯ ಗಡಿಯ ಬಳಿ ಒಟ್ಟು 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವ ಮೂಲಕ ಭಾರತ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ಕೈಗೊಂಡಿದೆ. ಈ ಯಶಸ್ವಿ ದಾಳಿಗೆ ಭಾರತವು ಅಮೆರಿಕ, ರಷ್ಯಾ, ಯುಕೆ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ದೇಶಗಳಿಗೆ ವಿವರಣೆಯನ್ನು ನೀಡಿದೆ. ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.