ನ್ಯೂಸ್

ಮೊದಲ ಚಿತ್ರಕ್ಕೆ 10 ಲಕ್ಷ ರೂಪಾಯಿ ಸಂಭಾವನೆ; 8 ವರ್ಷದ ಅವಧಿಯಲ್ಲಿ ಕೋಟಿ ಸಂಭಾವನೆ ಪಡೆಯುತ್ತಿರುವ ನಟಿ ಇವರೇ..!

ಸಾಯಿ ಪಲ್ಲವಿ ಸೌತ್ ಸಿನಿಮಾ ಇಂಡಸ್ಟ್ರಿಯ ಪ್ರಮುಖ ನಟಿಯರ ಲಿಸ್ಟ್​​ನಲ್ಲಿ ಯಾವಾಗಲೂ ಟಾಪ್​ನಲ್ಲಿಯೇ ಇದ್ದಾರೆ. ಯಾಳಂ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ ಇದೀಗ ಬಾಲಿವುಡ್​ಗೆ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ.


ಸಾಯಿ ಪಲ್ಲವಿ, ರಣಬೀರ್ ಕಪೂರ್ ಅವರೊಂದಿಗೆ ಬಾಲಿವುಡ್​ಗೆ ಪಾದರ್ಪಣೆ ಮಾಡಲು ರೆಡಿಯಾಗುತ್ತಿದ್ದು, ಈಕೆಯ ಮೊದಲ ಸಿನಿಮಾದ ಸಂಭಾವನೆ ಕೇಳಿದ್ರೆ ನೀವು ಶಾಕ್​​ ಆಗ್ತೀರಾ. ಈಕೆಯ ಮೊದಲ ಸಿನಿಮಾದ ಸಂಬಾವನೆ 10 ಲಕ್ಷ ರೂಪಾಯಿ.


ಸಾಯಿ ಪಲ್ಲವಿ ಮೊದಲ ಸಿನಿಮಾ ಪ್ರೇಮಂ. ಮೊದಲ ಚಿತ್ರದಲ್ಲೇ ಲಕ್ಷಗಟ್ಟಲೇ ಸಂಭಾವನೆ ಪಡೆದಿದ್ದಾರೆ. ನಟಿ ಸಾಯಿ ಪಲ್ಲವಿ ಪ್ರೇಮಂ ಸಿನಿಮಾಗಾಗಿ 10 ಲಕ್ಷ ರೂ ಪಡೆದಿದ್ದು, ಪ್ರೇಮಂ 2015 ರಲ್ಲಿ ಬಿಡುಗಡೆಯಾಗಿತ್ತು.


ಸಾಯಿ ಪಲ್ಲವಿ ದಕ್ಷಿಣ ಭಾರತದಲ್ಲಿ ಪ್ರತಿ ಚಿತ್ರಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರೆ. ನಟ ನಾಗ ಚೈತನ್ಯ ಅವರ ಹೊಸ ಚಿತ್ರಕ್ಕಾಗಿ ಸಾಯಿಪಲ್ಲವಿ ತಮ್ಮ ಸಂಭಾವನೆಯನ್ನು 30 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ.


ಇತ್ತೀಚಿನ ವರದಿಗಳ ಪ್ರಕಾರ, ಸಾಯಿ ಪಲ್ಲವಿ ಅವರು ರಣಬೀರ್ ಕಪೂರ್ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದು, ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.


'ಪ್ರೇಮಂ' ಸುಂದರಿ ಮುಂದಿನ ಸಿನಿಮಾಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ತೆಲುಗು ಸ್ಟಾರ್ ನಾನಿ ಜೊತೆ ಅಭಿನಯಿಸಲು ಸಾಯಿ ಪಲ್ಲವಿ ಹೆಚ್ಚಿನ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.