ಬೆಂಗಳೂರು: ರಾಜ್ಯದಲ್ಲಿ ಅನ್‌ಲಾಕ್ ಜಾರಿಯಲ್ಲಿರುವುದರಿಂದ ಬಸ್‌ನಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಸಾಮಾನ್ಯ ಸ್ಥಿತಿ ತಲುಪಿದ್ದಾರೆ. ಮಂಗಳವಾರ ಒಂದೇ ದಿನದಲ್ಲಿ(ಜುಲೈ 6ರಂದು) ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಒಟ್ಟು 10 ಲಕ್ಷ ಜನ ಪ್ರಯಾಣ ಬೆಳೆಸಿದ್ದಾರೆ.
ಮೊದಲನೇ ಅಲೆಯಲ್ಲಿ ಜನ ಸಂಚಾರ ಭಾರೀ ಕುಸಿದಿತ್ತು. ಕಳೆದ ವರ್ಷ ಜುಲೈ 6 ರಂದು ಕೇವಲ 3.8 ಲಕ್ಷ ಜನ ಮಾತ್ರ ಸಂಚರಿಸಿದ್ದರು. ಆದರೆ, ಪ್ರಸಕ್ತ ವರ್ಷ ಕರೊನಾ ಅನ್‌ಲಾಕ್ ಬಳಿಕ ಜನ ಸಂಚಾರ ಹೆಚ್ಚಾಗಿದೆ. ಇದರಿಂದ ಜನರು ಮೊದಲಿನಂತೆಯೇ ಸಂಚಾರ ಅರಂಭಿಸಿದ್ದಾರೆ. ಬೆಂಗಳೂರು- ತುಮಕೂರಿನ ಮಾರ್ಗವಾಗಿ 91 ಸಾವಿರ ಹಾಗೂ ಮೈಸೂರು ಮಾರ್ಗವಾಗಿ 72 ಸಾವಿರ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.