ನ್ಯೂಸ್

ಮನೆಗೆ ಬೆಂಕಿ ತಗುಲಿ 10 ನಾಯಿಗಳು ಸಜೀವ ದಹನ, ಹಲವು ಪಕ್ಷಿಗಳು ಸುಟ್ಟು ಕರಕಲು..10 Dogs And Birds Burnt

ಮಧ್ಯಪ್ರದೇಶ : ( 10 Dogs And Birds Burnt ) ಮನೆಯೊಂದಕ್ಕೆ ಬೆಂಕಿ ತಗುಲಿ ಸಂಭವಿಸಿದ  ಅವಗಢದಲ್ಲಿ 10 ನಾಯಿಗಳು ( Dogs) ಸುಟ್ಟು ಕರಕಲಾಗಿವೆ. ಮಧ್ಯಪ್ರದೇಶದ ಜಬಲ್ಪುರದ ಸಂಜೀವನಿ ನಗರದಲ್ಲಿ ಈ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ನಿವಾಸಿ ಮತ್ತು ಜಬಲ್‌ಪುರದಲ್ಲಿ ಕೋಚಿಂಗ್ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಜಲ್  ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ ಯಾವುದೋ ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾಜಲ್ ಮನೆಯಲ್ಲಿ ಹತ್ತಕ್ಕೂ ಹೆಚ್ಚು ನಾಯಿ ಮತ್ತು ಪಕ್ಷಿಗಳನ್ನು ಸಾಕಿದ್ದರು.

ಸೋಮವಾರ ನಡೆದ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಆದರೆ, ಇನ್ನೆರಡು ನಾಯಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಪೊಲೀಸ್ ಠಾಣಾ ಅಧಿಕಾರಿಯೊಬ್ಬರು ಮಾತನಾಡಿ, ಕಾಜಲ್ ಕುಂದು ಎಂಬ ಮಹಿಳೆ ಮನೆಯ ಬಾಡಿಗೆದಾರರಾಗಿದ್ದು, ಇವರು ಶ್ವಾನಗಳು ಸಾಕಿದ್ದಾರೆ. ಘಟನೆ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಆದರೆ ಅದರಲ್ಲಿ ವಾಸಿಸುವ ನಾಯಿಗಳನ್ನು ಸಕಾಲದಲ್ಲಿ ಹೊರತೆಗೆಯಲು ಸಾಧ್ಯವಾಗಲಿಲ್ಲ. ಎರಡು ನಾಯಿಗಳನ್ನು ರಕ್ಷಿಸಿದರೂ ಉಳಿದ ನಾಯಿಗಳ ಪ್ರಾಣ ಉಳಿಸಲಾಗಲಿಲ್ಲ ಎಂದು ಹೇಳಿದ್ದಾರೆ.

ಬೆಂಕಿಯ ಬಗ್ಗೆ ಸ್ಥಳೀಯರು ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ನಂತರ ಬೆಂಕಿಯನ್ನು ನಂದಿಸಲಾಯಿತು. ಬೆಂಕಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಲು ಕಾರಣ ಏನು ಎಂದು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ನೆರೆಹೊರೆಯವರು ಹೇಳುವ ಪ್ರಕಾರ, ಮಹಿಳೆ ತನ್ನ ಪ್ರಾಣಿಗಳ ಬಗ್ಗೆ ತುಂಬಾ ಸಂವೇದನಾಶೀಲಳಾಗಿದ್ದಳು ಮತ್ತು ಅವುಗಳನ್ನು ಕುಟುಂಬದವರಂತೆ ನೋಡಿಕೊಳ್ಳುತ್ತಿದ್ದಳು ಎನ್ನಲಾಗಿದೆ.