ಹತ್ತರಗಿ ಟೋಲ್ ಬಳಿ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ ವೇಳೆ ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ತಡೆದಿರುವುದು. 
ನ್ಯೂಸ್

ಅಕ್ರಮವಾಗಿ ಸಾಗಿಸುತ್ತಿದ್ದ 10 ಗೋವು ರಕ್ಷಣೆ

ಚಿಕ್ಕೋಡಿ: ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನ ತಡೆದು 10 ಜಾನುವಾರು ರಕ್ಷಿಸಿ, ವಾಹನ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ಶುಕ್ರವಾರ ನಡೆದಿದೆ. ಸಂಕೇಶ್ವರದಿಂದ ಹುಬ್ಬಳ್ಳಿಗೆ ಹೊರಟಿದ್ದ ವಾಹನವನ್ನು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಹತ್ತರಗಿ ಟೋಲ್ ಬಳಿ ತಡೆದು ಪರೀಕ್ಷಿಸಿದಾಗ ಇದು ಪತ್ತೆಯಾಗಿದೆ.

ವಾಹನದಲ್ಲಿದ್ದ ಆಕಳು ಮತ್ತು ಎತ್ತು ಸೇರಿ ಹತ್ತು ಜಾನುವಾರಗಳನ್ನು ರಕ್ಷಿಸಿ ರೈತರಿಗೆ ಹಸ್ತಾಂತರಿಸಲಾಗಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.