ಮುಂಬೈ: ಅದಾನಿ ಗ್ರೂಪ್ ಕಂಪನಿ ಅದಾನಿ ಪವರ್ ಷೇರುಗಳ ಬೆಲೆ ಸೋಮವಾರ ಹೊಸ ದಾಖಲೆ ಮಾಡಿದೆ. ಅದಾನಿ ಪವರ್‌ನ ಷೇರುಗಳ ಬೆಲೆ ಸೋಮವಾರ 15 ಶೇಕಡಾಕ್ಕಿಂತ ಹೆಚ್ಚಿನ ಏರಿಕೆಯೊಂದಿಗೆ 875 ರೂ. ತಲುಪಿತು.
ಸೋಮವಾರದ ವಹಿವಾಟಿನಲ್ಲಿ ಅದಾನಿ ಪವರ್‌ನ ಷೇರುಗಳ 896.75 ರೂ.ಗೆ ಮುಟ್ಟುವ ಮೂಲಕ 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು. ಅದಾನಿ ಪವರ್ ಷೇರುಗಳ 52 ವಾರಗಳ ಕನಿಷ್ಠ ಬೆಲೆ 230.95 ರೂ. ಇದೆ.
ಕಳೆದ ಕೆಲವು ವರ್ಷಗಳಲ್ಲಿ ಅದಾನಿ ಪವರ್‌ನ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಳೆದ 4 ವರ್ಷಗಳಲ್ಲಿ ಅದಾನಿ ಪವರ್ ಷೇರುಗಳ ಬೆಲೆ 2153% ಏರಿಕೆಯಾಗಿದೆ. ಜೂನ್ 5, 2020 ರಂದು ಅದಾನಿ ಪವರ್‌ನ ಷೇರುಗಳಲ್ಲಿ ಮಾಡಿದ 1 ಲಕ್ಷ ರೂ. ಹೂಡಿಕೆಯು ಈಗ 22.52 ಲಕ್ಷ ರೂ. ಆಗಿದೆ.
ಕಳೆದ 2 ವರ್ಷಗಳಲ್ಲಿ ಅದಾನಿ ಪವರ್ ಷೇರುಗಳ ಬೆಲೆ 207% ಹೆಚ್ಚಾಗಿದೆ. ಅದಾನಿ ಪವರ್ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 237% ಏರಿಕೆಯಾಗಿದೆ. ಜೂನ್ 5, 2023 ರಂದು ಅದಾನಿ ಪವರ್ ಷೇರುಗಳ ಬೆಲೆ 259.45 ರೂ. ಇತ್ತು. ಜೂನ್ 3, 2024 ರಂದು ಈ ಷೇರುಗಳ ಬೆಲೆ 875 ರೂ. ಆಗಿದೆ. ಕಳೆದ 6 ತಿಂಗಳಲ್ಲಿ ಅದಾನಿ ಪವರ್ ಷೇರುಗಳ ಬೆಲೆ ಶೇಕಡಾ 88 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಷೇರುಗಳ ಬೆಲೆ ಡಿಸೆಂಬರ್ 4, 2023 ರಂದು ರೂ 464.60 ರಷ್ಟಿತ್ತು. ಈ ವರ್ಷ ಇಲ್ಲಿಯವರೆಗೆ, ಅದಾನಿ ಪವರ್ ಷೇರುಗಳ ಬೆಲೆ 67% ರಷ್ಟು ಏರಿಕೆ ಕಂಡಿದೆ. ಈ ವರ್ಷದ ಆರಂಭದಲ್ಲಿ ಜನವರಿ 1, 2024 ರಂದು ಅದಾನಿ ಪವರ್ ಷೇರುಗಳ ಬೆಲೆ ರೂ. 525.30 ಇತ್ತು.