ನ್ಯೂಸ್

ಮೂವರು ಭಾರತೀಯರತ್ತ ಗುಂಡು ಹಾರಿಸಿದ ನೇಪಾಳಿ ಪೊಲೀಸರು; ಓರ್ವನ ಸ್ಥಿತಿ ಗಂಭೀರ

ಪಟನಾ: ನೇಪಾಳಿ ಪೊಲೀಸರ ಗುಂಡಿನ ದಾಳಿಗೆ ಭಾರತೀಯ ನಾಗರಿಕನೋರ್ವ ಗಂಭೀರ ಗಾಯಗೊಂಡಿದ್ದಾರೆ.

ಬಿಹಾರದ ಕಿಶಂಗಂಜ್​ನಲ್ಲಿರುವ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಶನಿವಾರ ಸಂಜೆ ನೇಪಾಳಿ ಪೊಲೀಸರು ಒಟ್ಟು ಮೂವರು ಭಾರತೀಯ ನಾಗರಿಕರತ್ತ ಗುಂಡು ಹಾರಿಸಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗಾಯಗೊಂಡ ವ್ಯಕ್ತಿಯನ್ನು ಜಿತೇಂದ್ರ ಕುಮಾರ್​ (25)ಎಂದು ಗುರುತಿಸಲಾಗಿದೆ. ಜಿತೇಂದ್ರ ಕುಮಾರ್​ ಸೇರಿ ಒಟ್ಟು ಮೂವರು ಶನಿವಾರ ಸಂಜೆ 7.40ರ ಹೊತ್ತಿಗೆ ತಮ್ಮ ಜಾನುವಾರುಗಳನ್ನು ಹುಡುಕುತ್ತ ನೇಪಾಳ ಗಡಿಯಲ್ಲಿರುವ ತೊಲಾ ಮಫಿ ಗ್ರಾಮಕ್ಕೆ ಹೋಗಿದ್ದರು. ಇದನ್ನೂ ಓದಿ: ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಾಳೆಯಿಂದ ‘ಕೊವಾಕ್ಸಿನ್’ ಲಸಿಕೆ​ ಮಾನವರ ಮೇಲಿನ ಪ್ರಯೋಗ ಪ್ರಾರಂಭ

ಗ್ರಾಮದ ಹೊರವಲಯದಲ್ಲಿರುವ ಗದ್ದೆಯಲ್ಲಿ ಓಡಾಡುತ್ತ ಜಾನುವಾರುಗಳನ್ನು ಹುಡುಕುತ್ತಿರುವಾಗ, ಗಡಿ ಕಾಯುತ್ತಿದ್ದ ಪೊಲೀಸರು ಅವರೆಡೆಗೆ ಗುಂಡು ಹಾರಿಸಿದ್ದಾರೆ. ಮೂವರಲ್ಲಿ ಜಿತೇಂದ್ರ ಕುಮಾರ್​ ತೀವ್ರವಾಗಿ ಗಾಯಗೊಂಡಿದ್ದಾರೆ. ನಂತರ ಗಡಿ ಪ್ರದೇಶದಲ್ಲಿದ್ದ ಭಾರತೀಯ ಪೊಲೀಸ್​ ಅಧಿಕಾರಿಗಳಿಗೂ ವಿಷಯ ತಿಳಿಸಲಾಗಿದೆ.

ಕಳೆದ ತಿಂಗಳು ಕೂಡ ಭಾರತ-ನೇಪಾಳ ಗಡಿಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ನೇಪಾಳಿ ಪೊಲೀಸರ ಗುಂಡಿಗೆ ಭಾರತೀಯ ನಾಗರಿಕನೋರ್ವ ಬಲಿಯಾಗಿದ್ದ. (ಏಜೆನ್ಸೀಸ್​)