ನ್ಯೂಸ್

ಉಮ್ಮತ್ತೂರು ಚೆಕ್‌ಪೋಸ್ಟ್‌ನಲ್ಲಿ 1.84 ಲಕ್ಷ ರೂ. ವಶ

ಹುಣಸೂರು: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1.84 ಲಕ್ಷ ರೂ.ಗಳನ್ನು ತಾಲೂಕಿನ ಉಮ್ಮತ್ತೂರು ಚೆಕ್‌ಪೋಸ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಸೋಮವಾರ ತಡರಾತ್ರಿ ಎಚ್.ಡಿ.ಕೋಟೆ ರಸ್ತೆಯಿಂದ ಹುಣಸೂರಿಗೆ ತೆರಳುತ್ತಿದ್ದ ಟಾಟಾ ಇಟ್ರಾ ಗೂಡ್ಸ್ ವ್ಯಾನ್ ಅನ್ನು ಉಮ್ಮತ್ತೂರು ಚೆಕ್‌ಪೋಸ್ಟ್ ಅಧಿಕಾರಿ ಎಂ.ಎಂ.ಮಂಜುನಾಥ್ ಮತ್ತವರ ತಂಡ ತಡೆದು ಪರಿಶೀಲಿಸಿದಾಗ 1.84,760 ರೂ. ನಗದು ಪತ್ತೆಯಾಯಿತು.


ಸೂಕ್ತ ದಾಖಲೆಗಳನ್ನು ನೀಡಲು ವಿಫಲರಾದ ಕಾರಣ ಹಣವನ್ನು ಸರ್ಕಾರಿ ಖಜಾನೆಗೆ ಜಮಾ ಮಾಡಲಾಯಿತು. ಹುಣಸೂರಿನ ಎಸ್‌ಎಲ್‌ವಿ ಏಜೆನ್ಸಿ ಮಾಲೀಕ ಅರುಣ್ ಕುಮಾರ್‌ಗೆ ಸೇರಿದ ಹಣ ಇದಾಗಿದ್ದು, ವ್ಯಾನ್‌ನಲ್ಲಿ ಮಾಲೀಕರೊಂದಿಗೆ ಚಾಲಕ ದಿಲೀಪ್ ಇದ್ದರು. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಸೂಕ್ತ ದಾಖಲೆ ಒದಗಿಸಿ ಹಣ ಹಿಂಪಡೆಯುಬಹುದಾಗಿದೆ ಎಂದು ತಹಸೀಲ್ದಾರ್ ಎಂ.ನಯನಾ ತಿಳಿಸಿದರು.


ಪರಿಶೀಲೆನ ವೇಳೆ ಚುನಾವಣಾ ಸಿಬ್ಬಂದಿ ಪ್ರಭಾಕರ್, ಫ್ಲೈಯಿಂಗ್ ಸ್ವ್ಕ್ಯಾಡ್ ತಂಡದ ಅನಿಲ್‌ಕುಮಾರ್, ಪೊಲೀಸ್ ಪೇದೆಗಳಾದ ಬಸವರಾಜು, ಜಯಚಂದ್ರ, ಫೋಟೋಗ್ರಾಫರ್ ಮಂಜು ಇದ್ದರು.