ದೇವದುರ್ಗ ತಾಲೂಕು ಪಲಕನಮರಡಿ ಗ್ರಾಪಂನಲ್ಲಿ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷ ಅಮರೇಶ ಪಾಟೀಲ್, ಪಿಡಿಒ ಚನ್ನಪ್ಪ, ಉಪಾಧ್ಯಕ್ಷೆ ಚನ್ನಮ್ಮ ಕರೆಪ್ಪ, ಸದಸ್ಯರಾದ ಹನುಮಗೌಡ ಮದರಕಲ್, ವೀರೇಶಗೌಡ ವಂದಲಿ, ಸಿದ್ದನಗೌಡ ಮೂಡಲಗುಂಡ ಇತರರಿದ್ದರು. 
ನ್ಯೂಸ್

1.65 ಕೋಟಿ ರೂ. ಕ್ರಿಯಾಯೋಜನೆ ಸಿದ್ಧ

ದೇವದುರ್ಗ: ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳ ಪಟ್ಟಿ ಮಾಡಿದ್ದು, 1.65 ಕೋಟಿ ರೂ. ಅನುದಾನದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಪಿಡಿಒ ಚನ್ನಪ್ಪ ಹೇಳಿದರು.

ತಾಲೂಕಿನ ಪಲಕನಮರಡಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಬೇಸಿಗೆ ಆರಂಭವಾಗುತ್ತಿರುವ ಕಾರಣ ಕುಡಿವ ನೀರಿಗಾಗಿ 51ಲಕ್ಷ ರೂ. ಮೀಸಲಿಟ್ಟು ಹಂತ ಹಂತವಾಗಿ ಕ್ರಿಯಾಯೋಜನೆ ತಯಾರಿಸಿ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷ ಅಮರೇಶ ಪಾಟೀಲ್ ಊಟಿ ಮಾತನಾಡಿ, ಗ್ರಾಪಂ ಸಿಬ್ಬಂದಿ ಕುಡಿವ ನೀರಿನ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು. ಗ್ರಾಮಸ್ಥರು ಸಮಸ್ಯೆ ಹೊತ್ತು ಬಂದರೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು. ಸ್ವಚ್ಛತೆ, ಚರಂಡಿ ಹೂಳು ತೆರವು, ಫಾಗಿಂಗ್ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಶ್ರಮಿಸಬೇಕು ಎಂದು ಸೂಚಿಸಿದರು.

ಉಪಾಧ್ಯಕ್ಷೆ ಚನ್ನಮ್ಮ ಕರೆಪ್ಪ, ಸದಸ್ಯರಾದ ಹನುಮಗೌಡ ಮದರಕಲ್, ವೀರೇಶಗೌಡ ವಂದಲಿ, ಸಿದ್ದನಗೌಡ ಮೂಡಲಗುಂಡ, ಚಾಂದ್‌ಪಾಷಾ, ಮಾನಯ್ಯ ಕಜ್ಜಿ, ಸಂಗಮ್ಮ, ನಾಗರಾಜ ಸಾಹುಕಾರ, ರಾಮಣ್ಣ ವಂದಲಿ, ಹನುಮಂತಿ ಅಮರೇಶ, ರೇಣುಕಮ್ಮ ಶಿವಪ್ಪ, ದಾವಲಬಿ ಅಲಿ ಸಾಬ್, ಸೋಮಲಿಂಗಮ್ಮ, ರಂಗಪ್ಪ, ರಂಗಮ್ಮ ಬಸವರಾಜ ಇದ್ದರು.