ನ್ಯೂಸ್

ಗುಪ್ತಾಂಗದಲ್ಲಿತ್ತು 1.3 ಕೆಜಿ ಕೊಕೇನ್!

ಬೆಂಗಳೂರು: ಗುಪ್ತಾಂಗದಲ್ಲಿ ಮಾದಕವಸ್ತು ಕೊಕೇನ್ ಇಟ್ಟುಕೊಂಡು ಹೋಗುತ್ತಿದ್ದ ವಿದೇಶಿ ಮಹಿಳೆಯನ್ನು ಕೆಐಎಎಲ್ ಕಸ್ಟಮ್್ಸ ಅಧಿಕಾರಿಗಳು ಬಂಧಿಸಿದ್ದಾರೆ.

ಗ್ವಾಟೆಮಾಲಾದ ಹೆರೆರಾ ವ್ಯಾಲೆಂಜ್ಯುವೆಲಾ (30) ಬಂಧಿತ ಮಹಿಳೆ. ಈಕೆಯಿಂದ 8.31 ಕೋಟಿ ರೂ. ಮೌಲ್ಯದ 1.385 ಕೆ.ಜಿ. ಕೊಕೇನ್ ಜಪ್ತಿ ಮಾಡಲಾಗಿದೆ. ಏರ್​ಲೈನ್ಸ್ ಇಟಿ-690 ವಿಮಾನದಲ್ಲಿ ಮಾ.2ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯ ತಪಾಸಣೆ ವೇಳೆ ಅನುಮಾನಾಸ್ಪದ ವಸ್ತು ಮೆಟಲ್ ಡಿಟೆಕ್ಟರ್​ನಲ್ಲಿ ಕಂಡು ಬಂದಿತ್ತು. ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದಾಗ ಗುಪ್ತಾಂಗದಲ್ಲಿ ಕೊಕೇನ್ ಇಟ್ಟುಕೊಂಡಿರುವುದು ಪತ್ತೆಯಾಗಿದೆ.

ಮಾತ್ರೆ ಆಕಾರದಲ್ಲಿರುವ 150 ಕ್ಯಾಪ್ಸೂಲ್​ಗಳಲ್ಲಿ ಕೊಕೇನ್ ಪೌಡರ್ ತುಂಬಲಾಗಿತ್ತು ಎಂದು ಕಸ್ಟಮ್್ಸ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.