ಕನ್ನಡದ ನಟಿ ರುಕ್ಮಿಣಿ ವಸಂತ್ 
ಮಾಲಿವುಡ್

ಕನ್ನಡ, ತೆಲುಗು, ತಮಿಳು ಆಯ್ತು! ಈಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿಕೊಟ್ಟ ಸ್ಯಾಂಡಲ್​ವುಡ್​ನ 'ಟಾಕ್ಸಿಕ್'​ ಬೆಡಗಿ | Rukmini Vasanth

ಪ್ರಮುಖ ಮುಖ್ಯಾಂಶಗಳು

  • 'ಟಾಕ್ಸಿಕ್'​' ಬೆಡಗಿಗೆ ಶುರುವಾಯಿತು ಅವಕಾಶಗಳ ಸುರಿಮಳೆ
  • ಕನ್ನಡ, ತೆಲುಗು, ತಮಿಳು ಆಯ್ತು ಈಗ ಮಾಲಿವುಡ್​ಗೂ ಎಂಟ್ರಿ 'ಕಾಂತಾರ' ಕನಕಾವತಿ
  • ಮಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿರುವ ರುಕ್ಮಿಣಿ ವಸಂತ್​
ಕೊಚ್ಚಿ: ರಿಷಬ್ ಶೆಟ್ಟಿ ನಟನೆಯ ಬ್ಲಾಕ್​ಬಸ್ಟರ್​ 'ಕಾಂತಾರ' ಚಾಪ್ಟರ್​ 1 ಚಿತ್ರದಲ್ಲಿ ಕನಕಾವತಿ ಪಾತ್ರದಲ್ಲಿ ಮಿಂಚಿದ ಸೌತ್ ಬ್ಯೂಟಿ ರುಕ್ಮಿಣಿ ವಸಂತ್​ಗೆ (Rukmini Vasanth ) ಸದ್ಯ ಅಭಿಮಾನಿಗಳ, ಅವಕಾಶಗಳ ಅಲೆ ಜೋರಾಗಿದೆ. ಯಶ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ವರ್ಲ್ಡ್​ ಟಾಕ್ಸಿಕ್​ನಲ್ಲಿ ಮೆಲ್ಲಿಸಾ ಆಗಿ ಕಾಣಿಸಿಕೊಂಡಿರುವ ರುಕ್ಕು, ಇದೀಗ ಕನ್ನಡ, ತೆಲುಗು, ತಮಿಳು ಚಿತ್ರರಂಗಗಳ ಬಳಿಕ ಮಾಲಿವುಡ್​ಗೂ ಲಗ್ಗೆಯಿಟ್ಟಿದ್ದಾರೆ.
ಮಲಯಾಳಂ ಚಿತ್ರರಂಗದ ಸ್ಟಾರ್​ ಹೀರೋ ನಿವಿನ್ ಪೌಲಿ ಅವರ 51ನೇ ಚಿತ್ರಕ್ಕೆ ರುಕ್ಮಿಣಿ ವಸಂತ್ ಅವರೇ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಮಾಲಿವುಡ್​ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಮಹೂರ್ತ ಕೊಚ್ಚಿಯಲ್ಲಿ ನೆರವೇರಿದ್ದು, ಚಿತ್ರಕ್ಕೆ ಇನ್ನೂ ಟೈಟಲ್​ ಫಿಕ್ಸ್​ ಮಾಡಿಲ್ಲ ಎನ್ನಲಾಗಿದೆ. ನಶೀದ್ ಮೊಹಮ್ಮದ್ ಫ್ಯಾಮಿ ಸಿನಿಮಾಗೆ ಆ್ಯಕ್ಷನ್ ಕಟ್​ ಹೇಳಲಿದ್ದಾರೆ.
'ಪ್ರೇಮಂ' ಖ್ಯಾತಿಯ ನಿವಿನ್ ಪೌಲಿ ಮತ್ತು ಕನ್ನಡದ ಬ್ಯೂಟಿ ರುಕ್ಮಿಣಿ ವಸಂತ್ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, 'ಸಪ್ತ ಸಾಗರದಾಚೆ ಎಲ್ಲೋ' ಮತ್ತು 'ಕಾಂತಾರ: ಚಾಪ್ಟರ್​ 1', 'ಡ್ರ್ಯಾಗನ್'​ ಸೇರಿದಂತೆ ತೆಲುಗು, ತಮಿಳಿನ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರುಕ್ಮಿಣಿ, ಈಗ ಮಲಯಾಳಂನ ಯಾವ ಜಾನರ್​ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ? ಯಾವ ಪಾತ್ರದಲ್ಲಿ ರುಕ್ಕು ಮೋಡಿ ಮಾಡಲಿದ್ದಾರೆ? ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಕಾಡತೊಡಗಿದೆ.   
ಈ ಚಿತ್ರದಲ್ಲಿ ಜಗದೀಶ್, ಕಲಾರಂಜಿನಿ, ಅಶೋಕನ್, ಅಜ್ಜು ವರ್ಗೀಸ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಟಿನ್ ಪ್ರಕ್ಕಟ್ ಫಿಲಂಸ್ ಬ್ಯಾನರ್, ಪಾಲಿ ಜೂನಿಯರ್ ಪಿಕ್ಚರ್ಸ್ ಅಡಿಯಲ್ಲಿ ನಿವಿನ್ ಪಾಲಿ ಮತ್ತು ಗ್ರೀನ್ ರೂಮ್ ಪ್ರೊಡಕ್ಷನ್ ಮುಂದಾಳತ್ವದಲ್ಲಿ ಸಿಬಿ ಚವರ ಮತ್ತು ರಂಜಿತ್ ನಾಯರ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಚಿತ್ರೀಕರಣ ಯಾವಾಗ ಪ್ರಾರಂಭ ಎಂಬುದರ ವಿವರ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ,(ಏಜೆನ್ಸೀಸ್).