Sai Pallavi's Old Remark Goes Viral Amid Ramayana Casting Row 
ಮಾಲಿವುಡ್

ನನ್ನ ಕಣ್ಣಿಗಿಂತ ಮೊಡವೆಗಳನ್ನೇ ನೋಡ್ತಿದ್ರು...; ಸೀತಾ ಪಾತ್ರಕ್ಕೆ ನಟಿ Sai Pallavi ಆಯ್ಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಳೇ ವಿಡಿಯೋ ವೈರಲ್

ಪ್ರಮುಖ ಮುಖ್ಯಾಂಶಗಳು

  • ರಾಮಾಯಣ' ಚಿತ್ರದಲ್ಲಿ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಪರ-ವಿರೋಧ ಚರ್ಚೆ
  • ಸಾಯಿ ಪಲ್ಲವಿಯವರ ಸರಳತೆ ಮತ್ತು ಅಭಿನಯವೇ ಮುಖ್ಯ ಎಂದು ಕೆಲವರಿಂದ ಬೆಂಬಲ
  • ಮಲಯಾಳಂನ 'ಪ್ರೇಮ್‌ಮ್' ಚಿತ್ರದ ಮೂಲಕ ನಟನೆ ಮುಂದುವರೆಸಲು ಪ್ರೇಕ್ಷಕರು ಕಾರಣ ಎಂದಿದ್ದ ನಟಿ

Sai Pallavi's Old Remark Goes Viral Amid Ramayana Casting Row: 

ರಾಮಾಯಣದಲ್ಲಿ ಸೀತಾ ಪಾತ್ರಕ್ಕೆ ಸೌತ್​ ಇಂಡಿಯನ್​ ನಟಿ ಸಾಯಿ ಪಲ್ಲವಿ ಸೂಟ್​ ಆಗೋದಿಲ್ಲ ಎಂದು ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿರುವ ಬೆನ್ನಲ್ಲೇ, ಸಾಯಿ ಪಲ್ಲವಿ ಅವರ ಹಳೆಯ ಸಂದರ್ಶನವೊಂದು  ಮುನ್ನೆಲೆಗೆ ಬಂದಿದ್ದು,  ಸೌಂದರ್ಯದ ಮಾನದಂಡಗಳು, ಮೊಡವೆ ಹಾಗೂ ನೈಸರ್ಗಿಕ ಸೌಂದರ್ಯದ ಬಗೆಗಿನ ಚರ್ಚೆ ವೈರಲ್ ಆಗಿದೆ. 

ಸಾಯಿ ಪಲ್ಲವಿ ಸೀತೆ ಪಾತ್ರಕ್ಕೆ ಸೂಕ್ತವೇ? 

ಸಾಯಿಪಲ್ಲವಿ ಅವರು ಈ ಹಿಂದೆ ಮಾಡಿರುವ ಸಿನಿಮಾಗಳನ್ನು ತೆಗೆದುಕೊಂಡರೆ...ಅವರು ಈ ಪಾತ್ರಕ್ಕೆ ಸಂಪೂರ್ಣ ಸೂಕ್ತ. ಅವರು ನಟನೆಯು ಭಾವನಾತ್ಮಕತೆಗೆ ದೂಡುತ್ತದೆ. ಅವರಲ್ಲದೇ ಬೇರಾರು ಈ ಪಾತ್ರ ಮಾಡೋಕೆ ಸಾಧ್ಯನೆ ಇಲ್ಲ ಎಂದು ಕೆಲವರು ಹೇಳಿದರೆ. ಇನ್ನೂ ಕೆಲವರು ಸಾಯಿಪಲ್ಲವಿ ಸೀತೆಯಷ್ಟು ಚೆನ್ನಾಗಿ ಇಲ್ಲ. ರಕುಲ್ ಪ್ರೀತ್​ ಈ ಪಾತ್ರಕ್ಕೆ ಸೂಕ್ತ.  ಪುರಾಣದಲ್ಲಿ  ಸೀತೆಯ ಸೌಂದರ್ಯವನ್ನು ಹೇಗೆ ವರ್ಣಿಸಲಾಗಿದೆಯೋ, ಆ ವಿವರಣೆಗೆ ಇವರು ಹೊಂದುವುದಿಲ್ಲ  ಎನ್ನುವುದು ಹಲವರ ವಾದ. 

ಈ ಹಿಂದೆ ಸಾಯಿಪಲ್ಲವಿ ಹೇಳಿದ್ದೇನು?

ಖಾಸಗಿ ಪತ್ರಿಕೆಯೊಂದಿಗೆ ಸಾಯಿಪಲ್ಲವಿ ಅವರು ಮಾತನಾಡಿರುವ ಹಳೆಯ ಸಂದರ್ಶನದ ವಿಡಿಯೋವೊಂದು ಸದ್ಯ ವೈರಲ್ ಆಗಿದೆ.  ಮೊಡವೆ ಹಾಗೂ ರೋಸೇಷಿಯಾ ಸಮಸ್ಯೆಗಳ  ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 
'ಜನರು ನಾನಿರುವ ಹಾಗೆ ಅಂದರೆ, ಮೊಡವೆ ಇದ್ದರೂ ನನ್ನ ನಟನೆಯನ್ನು ಒಪ್ಪಿಕೊಂಡಾಗ ಅಸಲಿ ಸೌಂದರ್ಯ ಎಂಬುದನ್ನು ನಾನು ಕಲಿತುಕೊಂಡೆ'.  'ಸಿನಿಮಾರಂಗಕ್ಕೆ ಕಾಲಿಡುವ ಮುನ್ನ , ಪ್ರೇಮಮ್​ ಸಿನಿಮಾ ಮಾಡುವ ಮುನ್ನ ನಾನು ಮನೆಬಿಟ್ಟು ಹೊರಬರಲು ಭಯವಾಗ್ತಿತ್ತು.  ಜನರು ನನ್ನ ಕಣ್ಣುಗಳನ್ನು ನೋಡುವುದನ್ನು ಬಿಟ್ಟು ನನ್ನ  ಮೊಡವೆ ನೋಡ್ತಿದ್ರು. ಇದು ನನಗೆ ಅತ್ಯಂತ ಸಂಕಟ ಕ್ಷಣ ಹೀಗಾಗಿ ನಾನು ಹೆಚ್ಚು ಮನೆಯಲ್ಲೇ ಇರುತ್ತಿದ್ದೆ'  ಎಂದು ಭಾವುಕರಾಗಿದ್ದರು.
'ಆದರೆ 'ಪ್ರೇಮ್‌ಮ್' ಚಿತ್ರದ ಬಳಿಕ ಪ್ರೇಕ್ಷಕರು  ಪ್ರತಿಯೊಂದು ನ್ಯೂನತೆಯ ಸಮೇತ ನನ್ನನ್ನು ಸ್ವೀಕರಿಸಿದರು. ಅಲ್ಲಿಂದ ಆಲೋಚನೆಯನ್ನು ಬದಲಾಯಿಸಿತು.  ನನ್ನನ್ನು ಹೆಚ್ಚು ಇಷ್ಟಪಟ್ಟರು ಮತ್ತು ಇಂತಹ ಪ್ರೀತಿ ಭದ್ರತೆಯಿಲ್ಲದೆ ಪರದಾಡುವ ಹದಿಹರೆಯದವರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ನಾನು ಕಂಡುಕೊಂಡೆ.  ಅವರ ನಂಬಿಕೆ, ಪ್ರೀತಿ, ವಿಶ್ವಾಸ ಹಾಗೂ ಬೆಂಬಲ ನಾನಿನ್ನು ಒಂದಷ್ಟು ಕಾಲ ಸಿನಿಮಾರಂಗದಲ್ಲಿ ಇರಲು  ಶಕ್ತಿ ನೀಡಿತು' ಎಂದಿದ್ದರು.

2 ಕೋಟಿ ರೂ. ಫೇರ್‌ನೆಸ್ ಕ್ರೀಮ್ ಜಾಹೀರಾತು ರಿಜೆಕ್ಟ್

 ಜನರ ಸ್ವಾಭಿಮಾನದ ಮೇಲೆ ನೆಗೆಟಿವ್ ಪ್ರಭಾವ ಬೀರುವ ಯಾವುದೇ ಆದರ್ಶಗಳನ್ನು ತಾನು ಪ್ರಚಾರ ಮಾಡಲು ಬಯಸುವುದಿಲ್ಲ ಎಂದು ಹೇಳಿ, ಅವರು ಬರೋಬ್ಬರಿ 2 ಕೋಟಿ ರೂಪಾಯಿ ಮೌಲ್ಯದ ಫೇರ್‌ನೆಸ್ ಕ್ರೀಮ್ ಎಂಡೋರ್ಸ್‌ಮೆಂಟ್‌ ಅನ್ನು ತಿರಸ್ಕರಿಸಿದ್ದರು.
'ಬಾಲಿವುಡ್ ಹಂಗಾಮಾ'ಗೆ ನೀಡಿ, 'ಬ್ರಟ್ ಇಂಡಿಯಾ' ಮರುಪ್ರಕಟಿಸಿದ್ದ ಸಂದರ್ಶನದಲ್ಲಿ ಅವರು ತಮ್ಮ ನಿರ್ಧಾರದ ಕುರಿತು ಮಾತನಾಡುತ್ತಾ, 'ಇದು ವೈಯಕ್ತಿಕ ಆಯ್ಕೆ. ಆದರೆ ನಾವು ಮಾಡುವ ಕೆಲವು ಆಯ್ಕೆಗಳು ಬಹುಸಂಖ್ಯಾತ ಜನರಿಗೆ ತೊಂದರೆ ಉಂಟುಮಾಡುವಾಗ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮ ಚರ್ಮದ ಬಣ್ಣ ಅಥವಾ ಸಮಾಜದಲ್ಲಿ ನಾವು ಸೃಷ್ಟಿಸಿರುವ ಸೌಂದರ್ಯದ ಮಾನದಂಡಗಳಿಂದಾಗಿ ಕೀಳರಿಮೆ ಅನುಭವಿಸಿದ ಸ್ನೇಹಿತರು ಮತ್ತು ಕುಟುಂಬದವರನ್ನು ನಾನು ಹತ್ತಿರದಿಂದ ಕಂಡಿದ್ದೇನೆ' ಎಂದಿದ್ದರು, (ಏಜೆನ್ಸೀಸ್).