ಬೆಟ್ಟದಪುರದ ಎಸ್‌ಎಂಎಸ್ ಕಾಲೇಜಿನ ಕಾಲೇಜಿನ ವತಿಯಿಂದ ಸಮೀಪದ ರಾಜನಬಿಳಗೂಲಿಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದ ಕಲಾರತಿ ಮಹದೇವ್ ಮತ್ತು ಅವರ ಪತ್ನಿ ಆರತಿ ಅವರನ್ನು ಸನ್ಮಾನಿಸಲಾಯಿತು. ಶಿಬಿರಾಧಿಕಾರಿಗಳಾದ ಯಶವಂತಕುಮಾರ್ ಜೆ.ಎಸ್. ಸತೀಶ, ಸಹ ಶಿಬಿರಾಧಿಕಾರಿ ಕುಬೇರ, ಬಸವರಾಜ್, ಮುಖಂಡರಾದ ರಾಜೇಗೌಡ, ಅಪ್ಪಣಿಗೌಡ, ಮಹದೇವ ಇದ್ದರು.  camp
ಮಾಲಿವುಡ್

ಸ್ಥಳೀಯ ಕಲಾವಿದರಿಗೆ ಉತ್ತೇಜನ ನೀಡಿ

ಕಲಾವಿದ ಕಲಾರತಿ ಮಹದೇವ್ ಸಲಹೆ

ರಾಜನಬಿಳಗೂಲಿ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಬೆಟ್ಟದಪುರ: ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಸೂಕ್ತ ವೇದಿಕೆ ನೀಡಬೇಕು ಎಂದು ಕಲಾವಿದ ಕಲಾರತಿ ಮಹದೇವ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಸ್‌ಎಂಎಸ್ ಕಾಲೇಜಿನ ವತಿಯಿಂದ ಸಮೀಪದ ರಾಜನ ಬಿಳಗೂಲಿ ಗ್ರಾಮದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ಕುಗ್ರಾಮದಲ್ಲಿ ಜನಿಸಿದ ನಾನು ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ. ಸಾಕಷ್ಟು ಸಿನಿಮಾಗಳಲ್ಲೂ ಅಭಿನಯಿಸಿದ್ದೇನೆ. ಆದರೆ ತಾಲೂಕು ಆಡಳಿತ ಈವರೆಗೆ ನನ್ನನ್ನು ಗುರುತಿಸಿಲ್ಲ ಎಂದರು. ಸ್ಥಳೀಯ ಸಂಘ, ಸಂಸ್ಥೆಗಳು ಮೊದಲು ನಮ್ಮೂರಿನ ಕಲಾವಿದರಿಗೆ ಉತ್ತೇಜನ ನೀಡಬೇಕು. ಇದರಿಂದ ಹಲವು ಪ್ರತಿಭಾವಂತರು ದೊಡ್ಡ ದೊಡ್ಡ ಕಲಾವಂತರಾಗಲು ನೆರವಾಗುತ್ತದೆ ಎಂದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರಲು ಎನ್‌ಎಸ್‌ಎಸ್ ಸೇರಿದಂತೆ ಶಾಲಾ-ಕಾಲೇಜು ಹಂತದಲ್ಲಿ ದೊರೆಯುವ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಹದೇವ್ ಸಲಹೆ ನೀಡಿದರು. ಮಹದೇವ್ ಹಾಗೂ ಅವರ ಪತ್ನಿ ಆರತಿ ಮಹದೇವ್ ಅವರು ಚಿತ್ರಗೀತೆಗಳು, ಹಾಸ್ಯಭಾಷಣ, ಸ್ಟ್ಯಾಂಡ್‌ಅಪ್ ಕಾಮಿಡಿ ಮತ್ತು ನೃತ್ಯದ ಮೂಲಕ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರನ್ನು ರಂಜಿಸಿದರು. ಶಿಬಿರಾಧಿಕಾರಿಗಳಾದ ಯಶವಂತಕುಮಾರ್ ಜೆ.ಎಸ್. ಸತೀಶ, ಸಹ ಶಿಬಿರಾಧಿಕಾರಿಗಳಾದ ಕುಬೇರ, ಬಸವರಾಜ್ ಉಪನ್ಯಾಸಕಿ ಹರ್ಷಿತಾ, ಶಿಕ್ಷಕಿಯರಾದ ಶಾಲಿನಿ, ನಿತ್ಯಾ, ಅಕ್ಷತಾ, ಮುಖಂಡರಾದ ರಾಜೇಗೌಡ, ಅಪ್ಪಣಿಗೌಡ, ಮಹದೇವ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.