Drishyam 4 Unnecessary Sequel Why Won’t Makers Stop
- ದೃಶ್ಯಂ4 ಸಿನಿಮಾ ಬಗ್ಗೆ ಅಪ್ಡೇಟ್ ಕೊಟ್ಟ ನಿರ್ಮಾಪಕ ಆಂಟನಿ ಪೆರಂಬೂರು.
- ದೃಶ್ಯಂ 3 ನೋಡೋಕೆ ಆಗ್ಲಿಲ್ಲ, ಕತೆ ಎಳೆದಾಡಲಾಗಿತ್ತು ಎಂದ ನೆಟ್ಟಿಗರು.
- ಹಣಕ್ಕಾಗಿ ಫ್ರಾಂಚೈಸಿ ದೃಶ್ಯಂ ಸರಣಿಗಳನ್ನು ನಿರ್ಮಾಣ ಮಾಡ್ತಿದೆ ಎಂದು ಕಿಡಿ.
Drishyam 4 Unnecessary Sequel Why Won’t Makers Stop: 2013ರಲ್ಲಿ ರಿಲೀಸ್ ಆದ ದೃಶ್ಯಂ ಸಿನಿಮಾವು ಸಾಕಷ್ಟು ರಂಜಿಸಿತ್ತು. ಜಾರ್ಜ್ ಕುಟ್ಟಿಯ ತಂತ್ರಗಾರಿಕೆ, ಕುಟುಂಬದ ಮೇಲಿನ ಪ್ರೀತಿ ಒಟ್ಟಾರೆಯಾಗಿ ಈ ಕ್ರೈಂ ಥ್ರಿಲ್ಲರ್ ಸಿನಿಮಾವು ಜನರನ್ನು ರಂಜಿಸಿತ್ತು. ಇತ್ತೀಚೆಗೆ ಬಿಡುಗಡೆಯಾದ ದೃಶ್ಯಂ 3 ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ, ಆದರೆ ಕತೆ ಬಗ್ಗೆ ನೀರಸ ಪ್ರತಿಕ್ರಿಯೆ ಪಡೆದಿತ್ತು. ಆ ಬೆನ್ನಲ್ಲೇ ಸಿನಿಮಾ ತಂಡ 'ದೃಶ್ಯಂ ದಿ ಕಂಕ್ಲ್ಯೂಷನ್' ಪೋಸ್ಟರ್ ಹಂಚಿಕೊಂಡಿದೆ. ಇದನ್ನು ಕಂಡ ನೆಟ್ಟಿಗರು...ಫ್ರಾಂಚೈಸಿಯನ್ನು ಅನಗತ್ಯವಾಗಿ ಮುಂದುವರೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ದೃಶ್ಯ 3 ಸಿನಿಮಾದ ಬಗ್ಗೆ ಅಸಮಾಧಾನ ಹೊಂದಿದ್ದರೂ ಸಹ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು. ಹಲವರು ಸಿನಿಮಾವನ್ನು ನೆಚ್ಚಿಕೊಂಡಿದ್ದರು. ಆದರೆ, ಕೆಲವರು ಇದನ್ನು ದೃಶ್ಯ ಸಿನಿಮಾ ರಿಲೀಸ್ ಆದ ಸರಣಿಯಲ್ಲಿ ಇದೊಂದು ವೀಕ್ ಭಾಗ ಎಂದು ಕರೆದಿದ್ದರು. ಮೋಹನ್ ಲಾಲ್ ಅವರ ನಟನೆ ಜೀವಂತವಾಗಿ ಕಂಡುಬಂದರೂ ಸಹ ಕತೆಯನ್ನು ಅನಗತ್ಯವಾಗಿ ಎಳೆದಾಡಲಾಗುತ್ತಿದೆ. ಕತೆಯಲ್ಲಿ ಯಾವುದೇ ಹೊಸತನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಆಂಟನಿ ಪೆರಂಬೂರು ಹೇಳಿದ್ದೇನು?
ಈ ಹೊತ್ತಲ್ಲೇ, ಜೀತು ಜೋಸೆಫ್ ನಿರ್ದೇಶನದ, ಆಂಟನಿ ಪೆರಂಬೂರು ನಿರ್ಮಾಣದ ಸಿನಿಮಾ ದೃಶ್ಯಂ 4 ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇಷ್ಟೇ ಅಲ್ಲದೇ ಕಾರ್ಯಕ್ರವೊಂದರಲ್ಲಿ ಫ್ರಾಂಚೈಸಿ ದೃಶ್ಯಂ 4ನೊಂದಿಗೆ ಮುಂದುವರಿಯಲು ಸಜ್ಜಾಗಿದೆ. ಮೂರನೇ ಚಿತ್ರದ ಯಶಸ್ಸಿನ ನಂತರ, ಮತ್ತೊಂದು ಕಂತು ಖಂಡಿತವಾಗಿಯೂ ಬರಲಿದೆ ಎಂದು ನಿರ್ಮಾಪಕ ಆಂಥೋನಿ ಪೆರುಂಬವೂರ್ ಮಝವಿಲ್ ಮನೋರಮಾ ಪ್ರಶಸ್ತಿ ಸಮಾರಂಭದಲ್ಲಿ ದೃಢಪಡಿಸಿದರು.
ಮೋಹನ್ ಲಾಲ್ ಮತ್ತು ಮೀನಾ ಹಾಗೂ ಇಬ್ಬರು ಮಕ್ಕಳಿಗೆ ಬಿಳಿ ಕೂದಲು ಬಂದಂತೆ ಚಿತ್ರಿಸಿ ಪೋಸ್ಟ್ ಮಾಡಲಾಗಿದೆ. ಇನ್ನು ದೃಶ್ಯಂ 3 ಭಯಾನಕವಾಗಿತ್ತು. ದೃಶ್ಯಂ 4 ನಲ್ಲಿ ಏನಿದೆ ಎಂದು ಖಚಿತವಿಲ್ಲ. ಹೇಗಾದರೂ ಇರಲಿ ಆ ದೃಶ್ಯಂ ಸಿನಿಮಾ ನೋಡಬಾರದು ಎಂದು ನಿರ್ಧರಿಸಿದ್ದೇನೆ ಎಂದು ನರೇಶ್ ನಂಬಿಸನ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ದೃಶ್ಯಂ3 ಸಿನಿಮಾ ನೋಡಲು ಚೆನ್ನಾಗಿಯೇ ಇರಲಿಲ್ಲ. ಆದರೆ ಈಗ ದೃಶ್ಯಂ 4ರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇದಕ್ಕಾಗಿ ಹಣ ಖರ್ಚು ಮಾಡಿಕೊಳ್ಳೋದು ಯಾಕೆ ಎಂದು Tarak esha @as35752 ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಸಿನಿಮಾ ಎನ್ನುವವರ ಖಾತೆಯಿಂದ ಕಾಮೆಂಟ್ ಮಾಡಿದ್ದು, ದೃಶ್ಯಂ 3 ಸಿನಿಮಾವನ್ನೇ ನೋಡಿಲ್ಲ. ಆಗಲೇ ದೃಶ್ಯಂ4 ಅನೌನ್ಸ್ ಆಯ್ತು. ಇನ್ನೂ ಎಷ್ಟು ದಿನ ಕತೆಯನ್ನು ಎಳೆಯುತ್ತಾರೆ. ದೃಶ್ಯಂ ಸಿನಿಮಾ ಮೂಲಕ ಹಣ ದೋಚುವುದು ಇವರ ಉದ್ದೇಶವೋ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).