ನನ್ನ ಬಾಳಿಗೆ ಕೊಳ್ಳಿ ಇಟ್ಟಳು... 4 ಕೋಟಿ ರೂ. ಸಂಪಾದನೆ ತಿಂದು ಹಾಕಿದವಳ ಕರಾಳ ಮುಖ ಬಿಚ್ಚಿಟ್ಟ ಶಕೀಲಾ | Actress Shakeela
- ಒಂದು ಕಾಲದಲ್ಲಿ ತಮಿಳು, ಮಲಯಾಳಂನ ಸಾಫ್ಟ್‌ಕೋರ್ ನೀಲಿ ಚಿತ್ರಗಳಲ್ಲಿ ನಟಿಸಿದ ಸ್ಟಾರ್ ಹೀರೋಯಿನ್
- ಉತ್ತುಂಗದಲ್ಲಿದ್ದಾಗ ಸಂಪಾದಿಸಿದ 4 ಕೋಟಿ ರೂ. ಹಣವನ್ನು ದೋಚಿದ ಸ್ವಂತ ಅಕ್ಕ
- ವರ್ಷಗಳ ಬಳಿಕ ತಮ್ಮ ಬಣ್ಣದ ಬದುಕಿನಲ್ಲಿ ಆದ ಕಹಿ ಘಟನೆಗಳ ಬಗ್ಗೆ ನಟಿ ಓಪನ್ ಟಾಕ್
Actress Shakeela: ಮಲಯಾಳಂ ನಟಿ ಶಕೀಲಾ ಬಗ್ಗೆ ಹೆಚ್ಚು ಪರಿಚಯದ ಅಗತ್ಯವಿಲ್ಲ. 1990ರ ದಶಕದ ಬಹುತೇಕರಿಗೆ ಶಕೀಲಾ ಪರಿಚಯ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್‌ಕೋರ್ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದ ನಟಿ. ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ, ದಿನ ಕಳೆದಂತೆ ಹಾಟ್ ನಟಿಯ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು. ಅಲ್ಲದೆ, ಶಕೀಲಾ ನಿರಂತರವಾಗಿ ಸಾಫ್ಟ್‌ಕೋರ್ ನೀಲಿ ಚಿತ್ರಗಳಲ್ಲಿ ನಟಿಸಿದ್ದರಿಂದ ಕೇರಳ ಸಿನಿಮಾ ಕ್ಷೇತ್ರದಿಂದಲೇ ಅವರನ್ನು ಬ್ಯಾನ್ ಮಾಡಲಾಯಿತು. ವರ್ಷಗಳ ಬಳಿಕ ತಮ್ಮ ಬಣ್ಣದ ಬದುಕಿನ ಕುರಿತು ನಟಿ ಒಂದಷ್ಟು ವಿಷಯಗಳನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ.
2000 ಇಸ್ವಿಯ ಆರಂಭದಲ್ಲಿ ಮಲಯಾಳಂ ಚಲನಚಿತ್ರೋದ್ಯಮ ಬಿಕ್ಕಟ್ಟಿನಲ್ಲಿದ್ದಾಗ ಶಕೀಲಾ ಸಾಫ್ಟ್‌ಕೋರ್ ಚಿತ್ರಗಳ ಮೂಲಕ ಪಾದಾರ್ಪಣೆ ಮಾಡಿದ್ದೇ ತಡ ನೆಲಕಚ್ಚಿದ್ದ ಮಾಲಿವುಡ್ ಪುಟಿದೇಳಲು ಆರಂಭಿಸಿತು. ಕೇವಲ 12 ಲಕ್ಷ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಕಿನ್ನರತುಂಪಿಗಲ್ (2000) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 4 ಕೋಟಿ ರೂ.ಗಿಂತ ಹೆಚ್ಚು ಲಾಭ ಗಳಿಸಿತು. ಈ ಚಿತ್ರವನ್ನು ವಿವಿಧ ಭಾಷೆಗಳಿಗೂ ಡಬ್ ಮಾಡಲಾಯಿತು. ಮತ್ತು ದೊಡ್ಡ ಸ್ಟಾರ್ ಚಿತ್ರಗಳ ಗಳಿಕೆಯನ್ನು ಇದೊಂದೇ ಹಿಂದಿಕ್ಕಿತು. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ 4 ಕೋಟಿ ರೂ.ಗೂ ಹೆಚ್ಚು ಆದಾಯ ತಂದುಕೊಟ್ಟಿದ್ದೇ ಆದರೂ ಉದ್ಯಮದ ಸೂಪರ್‌ಸ್ಟಾರ್‌ಗಳ ಗಳಿಕೆಗಿಂತ ಹೆಚ್ಚಿನ ಸಂಭಾವನೆ ಪಡೆಯಲು ಶಕೀಲಾಗೆ ಆಗಲಿಲ್ಲ. ಇದನ್ನು ಸ್ವತಃ ನಟಿಯೇ ಹೇಳಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಶಕೀಲಾ, ನಾನು ಸಂಪಾದಿಸಿದ ಬಹುತೇಕ ಹಣ ಇಂದು ನನ್ನ ಅಕ್ಕನ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ವ್ಯಂಗ್ಯವಾಗಿ ಹೇಳಿದರು. ಆಕೆ ಸಂತೋಷದಿಂದ ಜೀವನ ನಡೆಸುತ್ತಿದ್ದಾಳೆ. ನನ್ನವಳೇ ನನಗೆ ಹೆಚ್ಚು ದ್ರೋಹ ಮಾಡಿದ್ದಾಳೆ. ಅವಳು ಆರಂಭದಲ್ಲಿ ನನ್ನ ನೋಡಲು ಬರುತ್ತಿರಲಿಲ್ಲ ಎಂಬ ದುಃಖ ನನ್ನಲ್ಲಿತ್ತು. ಆದರೀಗ, ಅವಳು ವಾಪಾಸ್ ಬರದೆ ಇರೋದೇ ಒಳ್ಳೆಯದು. ಅದನ್ನೇ ದೇವರಲ್ಲಿ ಕೇಳಿಕೊಳ್ಳುವೆ. ಕಾರಣ, ಅವಳಿಗೆ ಇನ್ನು ಮುಂದೆ ಕೊಡಲು ನನ್ನ ಬಳಿ ಹಣವೂ ಇಲ್ಲ. ಜತೆಯಲ್ಲಿದ್ದವರು ನನ್ನ ಯೋಗಕ್ಷೇಮಕ್ಕಿಂತ, ನಾನು ಸಂಪಾದಿಸಿದ್ದ ಹಣದ ಮೇಲೆಯೇ ಹೆಚ್ಚು ಕಣ್ಣಾಕಿದ್ದರು ಎಂದಿದ್ದಾರೆ.
ಚಿತ್ರೋದ್ಯಮದ ವಿರುದ್ಧ ಯಾವುದೇ ದೂರಿಲ್ಲ
ಇಂಡಸ್ಟ್ರಿಯವರು ಶಕೀಲಾರನ್ನು ಇಂತಹ ಸಿನಿಮಾಗಳಿಗೆ ಉಪಯೋಗಿಸಿಕೊಂಡರು ಎಂಬ ಆರೋಪಗಳನ್ನು ತಿರಸ್ಕರಿಸಿದ ನಟಿ, ಇದು ಸರಿಯಲ್ಲ. ನಾನು ಮಾಡಿದ ಎಲ್ಲ ಕೆಲಸಗಳಿಗೆ ಸರಿಯಾಗಿ ಸಂಭಾವನೆಯನ್ನು ಕೊಡಲಾಗಿದೆ ಮತ್ತು ಚಿತ್ರರಂಗದ ಯಾರೊಬ್ಬರಿಂದಲೂ ಶೋಷಣೆಗೆ ಒಳಗಾಗಿಲ್ಲ ಎಂದು ಹೇಳಿದ್ದಾರೆ.
ಶಕೀಲಾ ಟ್ರೆಂಡ್
ಕೇರಳದ ಸ್ಟಾರ್ ನಟರು ನನ್ನ ವೃತ್ತಿಜೀವನವನ್ನು ಹಾಳು ಮಾಡಿದರು ಎಂದು ಇಂದಿಗೂ ಕೆಲವರು ಹೇಳುತ್ತಾರೆ. ಆದರೆ, ಅವರ ಮುಂದೆ ನಾನು ಕೇವಲ ಒಂದು ಸಣ್ಣ ಹುಲ್ಲು ಕಡ್ಡಿಯಾಗಿದ್ದೆ ಅಷ್ಟೇ. ಆ ದೊಡ್ಡ, ವಿಶಾಲ ಮನಸ್ಸಿನ ಜನರು ಆ ರೀತಿ ನಡೆದುಕೊಂಡಿಲ್ಲ. ಆಗ ನನ್ನದೊಂದು ಟ್ರೆಂಡ್ ಸೃಷ್ಟಿಯಾಗಿತ್ತು ಮತ್ತು ಅದು ಮುಂದೊಂದು ದಿನ ಕೊನೆಗೊಳ್ಳುತ್ತೆ ಎಂಬುದೂ ನನಗೆ ಚೆನ್ನಾಗಿ ತಿಳಿದಿತ್ತು. ಇಲ್ಲಿಯವರೆಗೆ ಅಭಿನಯಿಸಿದ ಚಿತ್ರಗಳ ಬಗ್ಗೆ ಯಾವುದೇ ವಿಷಾದವಿಲ್ಲ ಮತ್ತು 26 ವರ್ಷಗಳ ನಂತರವೂ, ಆ ಚಿತ್ರಗಳು ಅವರಿಗೆ ನೀಡಿದ ಜನಪ್ರಿಯತೆಯಿಂದಾಗಿ ಮಾಧ್ಯಮಗಳು ಇನ್ನೂ ನನ್ನನ್ನು ನೆನಪಿನಲ್ಲಿ ಇಟ್ಟುಕೊಂಡು, ಸಂದರ್ಶನಕ್ಕೆ ಕರೆಯುತ್ತಾರೆ ಎಂದರು.
ಐಪಿಎಸ್ ಅಧಿಕಾರಿ ಆಗುವ ಆಸೆ
ನನಗೆ ಜೀವನವನ್ನು ಹೊಸದಾಗಿ ಆರಂಭಿಸಲು ಇನ್ನೊಂದು ಅವಕಾಶ ಸಿಕ್ಕರೆ, ಐಪಿಎಸ್ ಅಧಿಕಾರಿಯಾಗಲು ಬಯಸುತ್ತೇನೆ ಹೊರತು ಚಿತ್ರರಂಗಕ್ಕೆ ಕಾಲಿಡುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಶಿಕ್ಷಕರು ಹೊಡೆಯುತ್ತಿದ್ದರು ಎಂಬ ಭಯದಿಂದ ಶಾಲೆಯನ್ನು ದ್ವೇಷಿಸುತ್ತಿದ್ದೆ. ಆದರೀಗ, ಮುಂದಿನ ಜೀವನದಲ್ಲಿ ಒಳ್ಳೆಯ ವಿದ್ಯಾಭ್ಯಾಸ ಮಾಡಿ, ಐಪಿಎಸ್ ಅಧಿಕಾರಿಯಾಗಲು ಬಯಸುವೆ ಎಂದಿದ್ದಾರೆ. ನಾನು ಯಾರನ್ನೂ ನನ್ನ ಸಿನಿಮಾ ನೋಡಿ ಎಂದು ಒತ್ತಾಯಿಸಿಲ್ಲ ಮತ್ತು ಯಾರ ಜೀವನವನ್ನು ಹಾಳು ಮಾಡಿಲ್ಲ ಎಂದು ವಿಶ್ವಾಸದಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).