ಲೈಫ್‌ಸ್ಟೈಲ್

ಯೋಗ ಗಂಗೋತ್ರಿ ಟ್ರಸ್ಟ್ ಆನ್​ಲೈನ್​ ಯೋಗ ಯಶಸ್ವಿ

ಬೆಂಗಳೂರು: 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಗಂಗೋತ್ರಿ ಟ್ರಸ್ಟ್ ಆಯೋಜಿಸಿದ ಆನ್​ಲೈನ್ ಯೋಗ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಸಹಯೋಗದೊಂದಿಗೆ ನಡೆದ ಯೋಗ ಕಾರ್ಯಕ್ರಮವನ್ನು ಲಕ್ಷಾಂತರ ಜನರು ಫೇಸ್​ಬುಕ್ ಮೂಲಕ ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಪ್ರಣವ ಮಂತ್ರ, ಗುರುಗೀತೆ, ಯೋಗಾಸನ ಮಂತ್ರಗಳನ್ನು ಜಪಿಸಲಾಯಿತು. ಸರ್ಕಾರದ ಸಾಮಾನ್ಯ ಶಿಷ್ಟಾಚಾರ ಪದ್ಧತಿಯ ಯೋಗಾಸನಗಳಾದ ತ್ರಿಕೋನಾಸನ, ಪಾದಹಸ್ತಾಸನ, ವಕ್ರಾಸನ, ತಂಡಾಸನ, ವಜ್ರಾಸನ, ಮಕರಾಸನ, ಭುಜಂಗಾಸನ ಸೇರಿ ಹಲವು ಆಸನಗಳನ್ನು ಪ್ರದರ್ಶಿಸಲಾಯಿತು. ಯೋಗ ಗಂಗೋತ್ರಿ ಸಂಸ್ಥೆಯ ಯೋಗಗುರು ಡಾ.ಎನ್. ಆರಾಧ್ಯ ನೇತೃತ್ವದಲ್ಲಿ ಹಲವು ನುರಿತ ಯೋಗಪಟುಗಳು ಯೋಗಾಸನ ಪ್ರದರ್ಶಿಸಿದರು.