ಲೈಫ್‌ಸ್ಟೈಲ್

ವಿಶ್ವ ಪ್ರತಿರಕ್ಷಣಾ​ ದಿನ: ವ್ಯಾಕ್ಸಿನೇಷನ್ ಯಾಕೆ ಮುಖ್ಯ? ಅದರ ಉಪಯೋಗಗಳೇನು.

shastrimath

ವಿಶ್ವ ಪ್ರತಿರಕ್ಷಣೆ ದಿನವನ್ನು ಪ್ರತಿವರ್ಷ ನವಂಬರ್ 10ರಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿರಕ್ಷಣೆಯು ಮಾರಕ ಸಾಂಕ್ರಾಮಿಕ ರೋಗವನ್ನು ತೆಗೆದುಹಾಕಲು ಹಾಗು ಅದರ ವಿರುದ್ಧ ಹೋರಾಡುವ ಒಂದು ಉತ್ತಮ ಸಾಧನ, ಪ್ರತಿವರ್ಷವು ಅಂದಾಜು 2-3 ಮಿಲಿಯನ್ ಜನರ ಸಾವನ್ನಪ್ಪುವುದನ್ನು ವ್ಯಾಕ್ಸಿನೇಷನ್ ತಡೆಯುತ್ತದೆ. ವಿಶ್ವ ರೋಗನಿರೋಧಕ ದಿನವನ್ನು ಆಚರಿಸುವ ಮೂಲ ಉದ್ದೇಶವೆ ಸಾರ್ವಜನಿಕರಲ್ಲಿ ವ್ಯಾಕ್ಸಿನ್‍ನನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದು ಹಾಗು ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವುದು. ಆದರೆ ವಿಶ್ವದಾದ್ಯಂತ 18.7 ಮಿಲಿಯನ್ ಮಕ್ಕಳು ಈ ವ್ಯಾಕ್ಸಿನೇಷನ್‍ನಿಂದ ವಂಚಿತರಾಗುತ್ತಿದಾರೆ ಎಂಬ ಅಂದಾಜಿದೆ.

ಭಾರತವು ಅಂತ್ಯಂತ ಹೆಚ್ಚಿನ ಸಾರ್ವತ್ರಿಕ ಪ್ರತಿರಕ್ಷಣ ಕಾರ್ಯಕ್ರಮವನ್ನು [Universal Immunization Programs (UIP)] ಹೊಂದಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್‍ನನ್ನು ಜನರಿಗೆ ನೀಡುತ್ತದೆ, ಭಾರೀ ವ್ಯಾಪ್ತಿಯ ಫಲಾನುಭವಿಗಳನ್ನು ಹೊಂದಿದೆ, ಹೆಚ್ಚಿನ ಮಾನವ ಸಂಪನ್ಮೂಲವನ್ನೂ ಬಳಸುತ್ತದೆ (Government bodies, NGOs) ಹಾಗು ಭೌಗೋಳಿಕ ಹರಡುವಿಕೆಯನ್ನು ಹೊಂದಿದೆ.  ಪ್ರತಿರಕ್ಷಣೆ (Immunization) ಎಂಬುದು ಒಂದು ಕಾರ್ಯವಿಧಾನ, ಈ ಮೂಲಕ ಒಬ್ಬ ವ್ಯಕ್ತಿಯು ರೋಗಕ್ಕೆ ಅಥವಾ ಕಾಯಿಲೆಗೆ ರೋಗನಿರೋಧಕ ಶಕ್ತಿಯನ್ನು ಹೊಂದುತ್ತಾನೆ. ಸಾಮಾನ್ಯವಾಗಿ ಈ ಶಕ್ತಿಯು ವ್ಯಾಕ್ಸಿನ್‍ನ ಮೂಲಕ ದೊರೆಯುತ್ತದೆ. ಪ್ರತಿರಕ್ಷಣೆಯು ಮಗುವನ್ನು ಮಾರಣಾಂತಿಕ ರೋಗಗಳಿಂದ ಪಾರುಮಾಡುತ್ತದೆ. ಇದು ರೋಗದ ಹರಡುವಿಕೆಯನ್ನೂ ಕ್ಷೀಣಿಸುತ್ತದೆ. ವ್ಯಾಕ್ಸಿನ್ ಪಡೆದನಂತರ ಅದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತದೆ, ಇದರಿಂದ ವ್ಯಕ್ತಿಯು ಮುಂಬರುವ ರೋಗಕ್ಕೆ ಅಥವಾ ಸೋಂಕಿಗೆ ಮುಂಚಿತವಾಗಿಯೇ ರಕ್ಷಣೆಯನ್ನು ಹೊಂದಿರುತ್ತಾನೆ. ಶಿಶುವು ಹುಟ್ಟಿನಿಂದಲೇ ನೈಜ ಪ್ರತಿರಕ್ಷಣಾ ಶಕ್ತಿಯನ್ನು ಸ್ತನ್ಯಪಾನದಿಂದ ಹೊಂದುತ್ತದೆ. ಆದರೆ ಈ ಪ್ರತಿರಕ್ಷಣೆಯು ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆಯು ಅಭಿವೃದ್ದಿಹೊಂದುತ್ತಿದ್ದಂತೆಯೇ ಕಡಿಮೆಯಾಗತೊಡಗುತ್ತದೆ. ಪ್ರತಿರಕ್ಷಣೆಯು ಹೆಚ್ಚು ವೆಚ್ಚದಾಯಕ ಆರೋಗ್ಯ ಹೂಡಿಕೆಗಳಲ್ಲೊಂದಾಗಿದ್ದು ಮತ್ತು ವ್ಯಾಕ್ಸಿನೇಷನ್‍ನಿಂದ ಯಾವುದೇ ರೀತಿಯ ಜೀವನಶೈಲಿಯ ಬದಲಾವಣೆಯ ಅಗತ್ಯವಿರುವುದಿಲ್ಲ.

ಲಸಿಕೆಯನ್ನು ಪಡೆಯುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

  • ಸದಾ ನಿಮ್ಮ ಮಗುವನ್ನು ಹೆಸರಾಂತ ಖಾಸಗಿ ಅಸ್ಪತ್ರೆಯಲ್ಲಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲೇ ವ್ಯಾಕ್ಸಿನೇಷನ್ ಮಾಡಿಸಿ. ಈ ಹಿಂದೆ ಹಾಕಿಸಿದ ವ್ಯಾಕ್ಸಿನೇಷನ್ ಅಥವಾ ಇಮ್ಯೂನೈಸೇಷನ್​ ನಿಂದ ಮಗುವಿಗೆ ಯಾವುದೇ ತರಹದ ಅಡ್ಡ ಪರಿಣಾಮ ಉಂಟಾದಲ್ಲಿ ವೈದ್ಯರಿಗೆ ಮಾಹಿತಿ ನೀಡಿ. 
  • ಯಾವಾಗಲೂ ವ್ಯಾಕ್ಸಿನ್‍ನ ಗಡುವು ದಿನಾಂಕವನ್ನು ತಿಳಿದುಕೊಳ್ಳಿ. ನಿಮ್ಮ ಮಗುವಿಗೆ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ವೈದ್ಯರಿಗೆ ಮಾಹಿತಿ ನೀಡಿ.
  • ವ್ಯಾಕ್ಸಿನೇಷನ್‍ಗಿಂತಲು ಪೂರ್ವವಾಗಿ ವೈದ್ಯರಿಂದ ಮಗುವಿಗೆ ಯಾವುದೇ ರೀತಿಯ ಅನಾರೋಗ್ಯವಿಲ್ಲವೆಂಬುವುದನ್ನು ಖಚಿತಪಡಿಸಿಕೊಳ್ಳಿ. ಡಿಪಿಟಿ ವ್ಯಾಕ್ಸಿನೇಷನ್‍ಗು ಮುಂಚಿತವಾಗಿ, ನಿಮ್ಮ ಮಗುವಿಗೆ ಈ ಹಿಂದೆ ಯಾವುದೇ ರೀತಿಯ ಫಿಟ್ಸ್ ಅಥವಾ ಸೆಳೆತ ಉಂಟಾಗಿದ್ದರೆ ವೈದ್ಯರಿಗೆ ಮಾಹಿತಿವದಗಿಸಿ.

ರೋಗಿಗಳು ನೆನಪಿಡುವ ಅಂಶಗಳು:

  • ಸದಾ “ಒಂದು ಸೂಜಿ; ಒಂದು ಸಿರಿಂಜ್” ಎಂಬ ನಿಯಮವನ್ನು ಅನುಸರಿಸಿ, ಎಂದರೆ ಒಂದು ಸೂಜಿಯನ್ನು ಹಾಗೂ ಒಂದು ಸಿರಿಂಜ್‍ನ್ನು ಒಮ್ಮೆ ಮಾತ್ರ ಉಪಯೋಗಿಸತಕ್ಕದ್ದು. ಸಿರಿಂಜ್ ಹಾಗೂ ಸೂಜಿಯನ್ನು ಉಪಯೋಗಿಸಿದ ನಂತರ ಎಸೆಯುವುದನ್ನು ಖಚಿತಪಡಿಸಿಕೊಳ್ಳಿ.
  • ಯಾವಾಗಲೂ ಇಮ್ಯೂನೈಸೇಷನ್​ ನ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಮಾರ್ಗಸೂಚಿಯಂತೆ ಪಾಲಿಸಿ. ನಿಮ್ಮ ಇಮ್ಮ್ಯುನೈಜೇಷನ್‍ನ ದಾಖಲೆಯನ್ನು ಪರಿಶೀಲಿಸಿ ಹಾಗೂ ನೀವು ಪ್ರತಿಬಾರಿ ವ್ಯಾಕ್ಸಿನೇಷನ್ ಮಾಡಿಸುವಾಗ ದಾಖಲೆಯನ್ನು ತೆಗೆದುಕೊಂಡುಹೋಗಿ.  ಯಾವುದೇ ಲಸಿಕೆ ಪಡೆಯುವ ಮೊದಲೇ ವೈದ್ಯರ ಸಲಹೆ ಪಡೆಯಿರಿ.

ಸಮರ್ಥ ಸಾಗರ, ಸ್ನಾತಕೋತ್ತರ ವಿದ್ಯಾರ್ಥಿ