ಲೈಫ್‌ಸ್ಟೈಲ್

133 ಕೆಜಿಯಿಂದ 86 ಕೆಜಿಯವರೆಗೆ... ಬರೋಬ್ಬರಿ 47 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೆ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕು.

ಒಂದೇ ಕಡೆ ಕುಳಿತು ಮಾಡುವ ಕೆಲಸಗಳಿಂದಾಗಿ ನೂರರಲ್ಲಿ ತೊಂಬತ್ತೊಂಬತ್ತು ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಿನ್ನುವುದರಲ್ಲಿ ನಾವು ಮಾಡುವ ಮಿಸ್ಟೇಕ್ಸ್​ ಕೂಡ ಅಧಿಕ ತೂಕದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ, ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ತೂಕವನ್ನು ನಿಯಂತ್ರಣ ಮಾಡಬಹುದು ಎಂದು ತಜ್ಞರು ಯಾವಾಗಲೂ ಹೇಳುತ್ತಲೇ ಇರುತ್ತಾರೆ.

ಕೆಲವು ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ತೂಕ ಇಳಿಕೆ ಮಾಡುವ ಮೂಲಕ ಅನೇಕರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ಅದೇ ವರ್ಗಕ್ಕೆ ಸೇರಿದ್ದಾಳೆ. ಆಕೆಯ ತೂಕ ಇಳಿಸುವ ಪ್ರಯಾಣವನ್ನು ನೋಡಿದರೆ, ಖಂಡಿತವಾಗಿಯೂ ನೀವು ಮೂಕವಿಸ್ಮಿತರಾಗುತ್ತೀರಿ. ಅದು ಹೇಗೆ ಅಷ್ಟೊಂದು ತೂಕ ಇಳಿಸಿಕೊಂಡರು ಎಂದು ನೀವು ಆಶ್ಚರ್ಯ ಪಡುತ್ತೀರಿ. 133 ಕೆಜಿ ತೂಕವಿದ್ದ ಯುವತಿ ಕೇವಲ 11 ತಿಂಗಳಲ್ಲಿ ಬರೋಬ್ಬರಿ 47 ಕೆಜಿಗೆ ತೂಕ ಇಳಿಸಿಕೊಂಡಿದ್ದಾರೆ. ಇಷ್ಟೊಂದು ತೂಕವನ್ನ ಹೇಗೆ ಇಳಿಸಿಕೊಂಡರು ಎಂಬುದನ್ನು ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಯುವತಿ ಹಂಚಿಕೊಂಡಿದ್ದಾಳೆ.

ಯುವತಿಯ ಹೆಸರು ಗುರೀಶ್​ ಕೌರ್​. ತೂಕ ಇಳಿಸಿಕೊಳ್ಳಲು ಕಠಿಣ ಆಹಾರ ನಿರ್ಬಂಧಗಳೇನು ಅನುಸರಿಸಲಿಲ್ಲ ಎಂದು ಹೇಳಿದ್ದಾರೆ. ಸ್ಥಿರವಾದ ಹಾಗೂ ಸಮತೋಲಿತ ಆಹಾರದ ಮೂಲಕ ತಾನು ತೂಕ ಇಳಿಸಿಕೊಂಡೆ. ಆಹಾರಗಳು ಮತ್ತು ಅವು ಒದಗಿಸುವ ಪೋಷಕಾಂಶಗಳ ಬಗ್ಗೆ ಜ್ಞಾನವನ್ನು ಬೆಳೆಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಕೌರ್ ಹೇಳುತ್ತಾರೆ.

ಕೌರ್​ ಅವರು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸಿಲ್ಲ ಆದರೆ, ಅವರ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸಿದ್ದಾರೆ. ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಆದ್ದರಿಂದ ಮೊಟ್ಟೆ, ಕೋಳಿ, ಕೆಲವು ರೀತಿಯ ಮೀನು ಮತ್ತು ಪ್ರೋಟೀನ್​ಭರಿತ ಆಹಾರಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಕೌರ್​ ಹೇಳಿದ್ದಾರೆ.

ಉತ್ತಮ ಜೀರ್ಣಕ್ರಿಯೆ ಮತ್ತು ಆರೋಗ್ಯಕರ ಕರುಳಿನ ಚಲನೆಗಾಗಿ ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಬೀಜಗಳು, ದ್ವಿದಳ ಧಾನ್ಯಗಳು ಮತ್ತು ಹಸಿರು ತರಕಾರಿಗಳನ್ನು ಪ್ರತಿದಿನ ಸೇವಿಸಬೇಕು. ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣವಾಗಿ ತ್ಯಜಿಸುವ ಬದಲು ನೀವು ಕೆಲವು ಆರೋಗ್ಯಕರ ಕಾರ್ಬೋಹೈಡ್ರೇಟ್ ಆಹಾರಗಳನ್ನು ಸೇವಿಸಬಹುದು ಎಂದು ಕೌರ್​ ತಿಳಿಸಿದ್ದಾರೆ.

ಶೇ. 100 ರಷ್ಟು ಆಹಾರ ಕ್ರಮದಲ್ಲಿ ಶೇ. 80 ರಷ್ಟು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರಗಳನ್ನು ಸೇವಿಸುವುದು ಅವಶ್ಯಕ. ಉಳಿದ 20% ಏನಾದರೂ ತಿನ್ನಬಹುದು. ಇಂತಹ ನಿಯಮಗಳನ್ನು ಪಾಲಿಸುವ ಮೂಲಕ 133 ಕೆಜಿ ಇದ್ದ ಕೌರ್​, 11 ತಿಂಗಳಲ್ಲಿ ತನ್ನ ತೂಕವನ್ನು 86 ಕೆಜಿಗೆ ಇಳಿಸಿಕೊಂಡಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. (ಏಜೆನ್ಸೀಸ್​)