ಲೈಫ್‌ಸ್ಟೈಲ್

ಸಿಹಿಗೆಣಸನ್ನು ಪ್ರತಿದಿನ ತಿನ್ನಿ ಎಂದು ವೈದ್ಯರು ಏಕೆ ಹೇಳ್ತಾರೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Sweet potato

Sweet potato : ಪ್ರತಿನಿತ್ಯ ನಮಗೆ ಅಗತ್ಯವಿರುವ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು. ಹಸಿರು ತರಕಾರಿ ಹಾಗೂ ಮೊಳಕೆ ಕಾಳುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಿಹಿಗೆಣಸು ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಆದರೆ, ಸಿಹಿಗೆಣಸು ತಿನ್ನುವುದನ್ನು ನಿರಾಕರಿಸುವವರೆ ಹೆಚ್ಚು. ಆ ತಪ್ಪನ್ನು ನೀವು ಎಂದಿಗೂ ಮಾಡಬೇಡಿ. ಸಿಹಿಗೆಣಸಿನ ಆರೋಗ್ಯ ಲಾಭಗಳನ್ನು ತಿಳಿದ್ರೆ ಅದನ್ನು ನೀವು ಮಿಸ್​ ಮಾಡೋದೆ ಇಲ್ಲ.

ಅಂದಹಾಗೆ ಸಿಹಿಗೆಣಸು ಮಣ್ಣಿನೊಳಗೆ ಬೆಳೆಯುವುದರಿಂದ ಇದು ಹಲವಾರು ರೋಗನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತದೆ. ಅಲ್ಲದೆ, ಜೀರ್ಣಕ್ರಿಯೆಗೂ ಇದು ಸಹಕಾರಿಯಾಗಿರುವುದರಿಂದ ಅನೇಕ ಆರೋಗ್ಯ ತಜ್ಞರು ರೋಗಿಗಳಿಗೆ ಇದನ್ನು ಶಿಫಾರಸ್ಸು ಮಾಡುತ್ತಾರೆ.

ಸಿಹಿಗೆಣಸು ಆರೋಗ್ಯ ಕಣಜವಾಗಿದ್ದು, ಇದರಲ್ಲಿ ವಿಟಮಿನ್​ ಎ, ವಿಟಮಿನ್​ ಬಿ ಮತ್ತು ವಿಟಮಿನ್​ ಸಿ ಹೆಚ್ಚಾಗಿದೆ. ಚರ್ಮರೋಗ, ಕಣ್ಣು ನೋವು, ರಕ್ತದೊತ್ತಡ, ಸ್ನಾಯುನೋವು ಹಾಗೂ ಇನ್ನಿತರ ಆರೋಗ್ಯ ಸಂಬಂಧಿತ ಕಾಯಿಲೆಗಳನ್ನು ಸಿಹಿಗೆಣಸು ಗುಣಪಡಿಸುತ್ತದೆ. ಇದು ನೋಡಲು ಉದ್ದವಾಗಿ, ದಪ್ಪವಾಗಿ ಸ್ವಲ್ಪ ವಿಚಿತ್ರವಾಗಿ ಕಂಡರು, ಮಣ್ಣಿನಲ್ಲಿರುವ ಸಂಜೀವಿನಿ ಗುಣವನ್ನು ಇದು ಹೊಂದಿರುತ್ತದೆ.

ಪ್ರಯೋಜನಗಳೇನು?

ಸಿಹಿಗೆಣಸಿನಲ್ಲಿ ವಿಟಮಿನ್​ ಎ ಮತ್ತು ಕಬ್ಬಿಣ ಅಂಶ ಅಧಿಕ ಪ್ರಮಾಣದಲ್ಲಿ ಇರುವುದರಿಂದ ದೃಷ್ಟಿ ಸಂಬಂಧಿತ ಸಮಸ್ಯೆ ಅಂದರೆ ಇರುಳುಗಣ್ಣು, ಕಣ್ಣಿನ ಪೊರೆ ಹೀಗೆ ಇನ್ನಿತರ ಸಮಸ್ಯೆಗೆ ಇದು ರಾಮಬಾಣವಾಗಿದೆ. ಇದರಲ್ಲಿ ಬೀಟಾ-ಕ್ಯಾರೋಟಿನ ಅಂಶವಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಿಹಿಗೆಣಸು ಫೈಬರ್​ನ ಅತ್ಯುತ್ತಮ ಮೂಲವಾಗಿದ್ದು, ಇದು ಮಲಬದ್ಧತೆಯನ್ನು ನಿವಾರಣೆ ಮಾಡುವಲ್ಲಿ ಸಹಕಾರಿಯಾಗಿದೆ.

ಸಿಹಿಗೆಣಸನ್ನು ಹಸಿಯಾಗಿ ಅಥವಾ ಬೇಯಿಸಿ ಕೂಡ ತಿನ್ನಬಹುದು. ಹಸಿಯಾಗಿ ತಿಂದರೆ ಇದರಲ್ಲಿನ ನಾರಿನಂಶ ಜಠರದ ಸಮಸ್ಯೆಯನ್ನು ನಿವಾರಿಸುತ್ತದೆ. ಅತಿ ಹೆಚ್ಚು ಪೌಷ್ಠಿಕಾಂಶ ದೊರೆಯುತ್ತದೆ. ಯಾರಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅಂಥವರಿಗೆ ಇದು ಸೂಕ್ತವಾಗಿದೆ. ಇದರಲ್ಲಿ ಅಧಿಕ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ಇರುವುದರಿಂದ ತೂಕ ಇಳಿಸುವುದು ತುಂಬಾ ಸುಲಭವಾಗಿದೆ. ಸಿಹಿಗೆಣಸಿನ ಪರಿಮಳ ಯಾವುದೇ ಗಿಡಮೂಲಿಕೆಗಳಿಗೂ ಕಡಿಮೆ ಇಲ್ಲ. ಇದರ ಜತೆಗೆ ಜೀರಿಗೆ, ಕರಿಮೆಣಸು ಮತ್ತು ಕೊತ್ತಂಬರಿ ಸೇರಿಸಿ ಸೇವಿಸಿದರೆ ಯಾವಾಗಲೂ ಆರೋಗ್ಯವಾಗಿ ಫಿಟ್ ಆಗಿರಬಹುದು. (ಏಜೆನ್ಸೀಸ್​)