ಲೈಫ್‌ಸ್ಟೈಲ್

ಟೀ, ಕಾಫಿಗೆ ಬ್ರೆಡ್ ಒಳ್ಳೆ ರುಚಿ ಅಲ್ವಾ?​ ಎಚ್ಚರ ಇದು ಹಲವು ರೋಗಗಳಿಗೆ ಆಹ್ವಾನ; ಇಲ್ಲಿದೆ ಉಪಯುಕ್ತ ಮಾಹಿತಿ | Bread

ಮೋಹನ್​ ಶೆಟ್ಟಿ

Bread: ಬೇಕರಿ ತಿನಿಸುಗಳಲ್ಲಿ ಬಹಳ ವೇಗವಾಗಿ ಹಾಗೂ ಹೆಚ್ಚು ಮಾರಾಟವಾಗುವ ಬ್ರೆಡ್​ ಮತ್ತು ಬನ್​ ಇಂದು ಬಹುತೇಕರ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆಯ ನೆಚ್ಚಿನ ತಿನಸು ಎಂದರೆ ಖಂಡಿತ ತಪ್ಪಾಗಲಾರದು. ಪ್ರತಿದಿನ ಬೆಳಗ್ಗಿನ ಚಹಾ/ ಕಾಫಿ ಜೊತೆಗೆ ಅಥವಾ ಜಾಮ್​/ ಸಾಸ್​ನೊಂದಿಗೆ ತಿನ್ನುವ ಅಭ್ಯಾಸ ಇಂದಿಗೂ ಹಲವರಿಗಿದೆ. ಅಸಲಿಗೆ ಬ್ರೆಡ್​ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯೇ? ಅಥವಾ ಏನ್ನೆಲ್ಲ ಸಮಸ್ಯೆಗಳು ಕಾಡಲಿದೆ ಎಂಬುದರ ವಿವರ ಹೀಗಿದೆ ತಿಳಿಯಿರಿ.

ಇರಲಿ ಎಚ್ಚರ!

ಯಾರಿಗಾದರೂ ಹುಷಾರಿಲ್ಲ ಎಂದು ಅವರು ಆಸ್ಪತ್ರೆ ಪಾಲಾಗಿದ್ದರೆ, ಅವರಿಗೆ ಹಾಲು ಮತ್ತು ಬ್ರೆಡ್​ ಕೊಡುವ ಪ್ರವೃತ್ತಿ ಇಂದಿಗೂ ನಮ್ಮಲ್ಲಿ ಹೆಚ್ಚಿದೆ. ಚಿಕ್ಕ ಮಕ್ಕಳಿಗೆ ಬ್ರೆಡ್ ಅಚ್ಚುಮೆಚ್ಚಿನ ತಿನಿಸು. ಅಸಲಿಗೆ ಬ್ರೆಡ್​ ಉತ್ತಮ ಆಹಾರವಲ್ಲ. ಕಾರಣ, ಇದು ಮೈದಾ, ಪಾಮ್ ಆಯಿಲ್/ಡಾಲ್ಡಾ, ಈಸ್ಟ್​ ಪುಡಿ ಸೇರಿದಂತೆ ಇನ್ನಿತರ ಸಾಮಾಗ್ರಿಗಳಿಂದ ತಯಾರಿಸ್ಪಲಟ್ಟ ಆಹಾರ. ಬ್ರೆಡ್​ ತಿನ್ನುವುದರಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ವಾಸ್ತವವಾಗಿ, ಬ್ರೆಡ್ ಅನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಫೈಬರ್ ಇರುವುದಿಲ್ಲ. ಆದ್ದರಿಂದ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳುವಲ್ಲಿ ಫೈಬರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಆದ್ರೆ, ಬ್ರೆಡ್​ನಲ್ಲಿ ಫೈಬರ್ ಅಂಶದ ಕೊರತೆಯಿಂದಾಗಿ, ಮಲಬದ್ಧತೆಯ ಸಾಧ್ಯತೆ ಹೆಚ್ಚು. ಜೀರ್ಣಕ್ರಿಯೆಗೂ ತೊಂದರೆ. ಹೆಚ್ಚು ಬ್ರೆಡ್ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಮತ್ತು ವಾಯು, ಆಮ್ಲೀಯತೆ ಮತ್ತು ಅನಿಲ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಬ್ರೆಡ್​ ಸೇವನೆಯಿಂದ ಕ್ಯಾನ್ಸರ್​ ಬರುತ್ತಾ?

ಇತ್ತೀಚೆಗೆ ಬ್ರೆಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಉದ್ಬವಿಸಿದೆ? ಆದರೆ, ಇಲ್ಲಿಯವರೆಗೆ ಯಾವುದೇ ಅಧ್ಯಯನಗಳು ಇದನ್ನು ಸಾಬೀತುಪಡಿಸಿಲ್ಲ. ಬ್ರೆಡ್ ಯಾವುದೇ ರೀತಿಯ ಕ್ಯಾನ್ಸರ್ ಅಂಶಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ, ಬ್ರೆಡ್ ಅನ್ನು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯವೇನಿಲ್ಲ ಎಂದು ಹೇಳಲಾಗಿದೆ,(ಏಜೆನ್ಸೀಸ್).